
ಪ್ರಗತಿವಾಹಿನಿ ಸುದ್ದಿ; ಜೈಪುರ: ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದ ಯುವಕನೊಬ್ಬ ಆಕೆಯ ಪ್ರೀತಿಗಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದ. ಆದರೆ ಆತನ ಹುಚ್ಚಾಟಕ್ಕೆ ಸೊಪ್ಪುಹಾಕದ ಮಹಿಳೆ ಯುವಕನತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಇದರಿಂದ ನಿರಾಶನಾದ ಯುವಕ ಮಹಿಳೆಯನ್ನೇ ಕೊಂದು ಶವವನ್ನು ತಬ್ಬಿ ಮಲಗಿದ ಘಟನೆ ರಾಜಸ್ಥಾನದ ಅಹೋರ್ ಪ್ರದೇಶದಲ್ಲಿ ನಡೆದಿದೆ.
ಎರಡು ಮಕ್ಕಳ ತಾಯಿ ಶಾಂತಾದೇವಿ ಎಂಬ ಮಹಿಳೆಯನ್ನು ಅಹೋರ್ ಗ್ರಾಮದ 21 ವರ್ಷದ ಗಣೇಶ್ ಮೀನಾ ಎಂಬ ಯುವಕ ಪ್ರೀತಿಸುತ್ತಿದ್ದ. ಯುವಕನ ಪ್ರೀತಿಯನ್ನು ಮಹಿಳೆ ನಿರಾಕರಿಸಿದ್ದಳು. ಮಹಿಳೆಯ ಪತಿ ಶಾಂತಿಲಾಲ್ ಮಹಾರಾಷ್ಟ್ರಕ್ಕೆ ಕೆಲಸಕ್ಕೆಂದು ತೆರಳಿದ್ದಾಗ ಮನೆ ಬಳಿ ಬಂದ ಯುವಕ ತನ್ನನ್ನು ಪ್ರೀತಿಸುವಂತೆ ಪೀಡಿಸಿದ್ದ. ಇದರಿಂದ ಬೇಸತ್ತ ಶಾಂತಿದೇವಿ ಯುವಕನಿಗೆ ಬುದ್ಧಿವಾದ ಹೇಳಿದ್ದಳು. ತನಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿರುವುದಾಗಿಯೂ ತಿಳಿಸಿದ್ದಳು. ಮಹಿಳೆಯ ಬುದ್ಧಿವಾದಕ್ಕೆ ಕೋಪಗೊಂಡ ಯುವಕ ಕೊಡಲಿಯಿಂದ ಆಕೆ ಮೇಲೆ ಹಲ್ಲೆ ನಡೆಸಿದ್ದಲ್ಲದೇ ದೇಹದ ಒಂದೊಂದೇ ಭಾಗವನ್ನು ಕತ್ತರಿಸಿ ತುಂಡರಿಸಿದ್ದಾನೆ.
ಪಾಗಲ್ ಪ್ರೇಮಿ ಹುಚ್ಚಾಟದಿಂದ ತನ್ನನ್ನು ಕಾಪಾಡುವಂತೆ ಮಹಿಳೆ ಕೂಗಿಕೊಂಡಿದ್ದಾಳೆ. ಮಹಿಳೆಯ ಕಿರುಚಾಟಕ್ಕೆ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿದ್ದಾರೆ. ಹತ್ತಿರಕ್ಕೆ ಬಂದವರನ್ನೂ ಕೊಲ್ಲುವುದಾಗಿ ಯುವಕ ಗಣೇಶ್ ಬೆದರಿಕೆಯೊಡ್ಡಿದ್ದಾನೆ. ಗ್ರಾಮಸ್ಥರ ಮುಂದೆಯೇ ಮಹಿಳೆ ನರಳಿ ನರಳಿ ಪ್ರಾಣಬಿಟ್ಟಿದ್ದಾಳೆ. ಮಹಿಳೆಯ ಶವವನ್ನು ತಬ್ಬಿ ಆರೋಪಿ ನೆಲದ ಮೇಲೆ ಮಲಗಿದ್ದಾನೆ. ವಿಷಯ ತಿಳಿಯುತ್ತಿದ್ದ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಪೊಲೀಸರು ಸೂಚಿಸಿದರೂ ಶವವನ್ನು ಬಿಡದ ಗಣೇಶ್ ನನ್ನು ಪೊಲೀಸರು ಎಳೆದು ವ್ಯಾನ್ ನಲ್ಲಿ ತುಂಬಿ ಠಾಣೆಗೆ ಕರೆದೊಯ್ದಿದ್ದಾರೆ. ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಅಹೋರ್ ಪ್ರದೇಶದ ಜನರು ಬೆಚ್ಚಿ ಬಿದ್ದಿದ್ದಾರೆ.
ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ, ತಾನೂ ಆತ್ಮಹತ್ಯೆಗೆ ಶರಣಾದ ತಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ