*ಕಿತ್ತೂರು ಚೆನ್ನಮ್ಮನ ಸ್ಮರಣೋತ್ಸವ ಅರ್ಥಪೂರ್ಣವಾಗಿ ಆಚರಿಸುವಂತೆ ಆಗ್ರಹ*
ಪ್ರಗತಿವಾಹಿನಿ ಸುದ್ದಿ: ವೀರ ರಾಣಿ ಕಿತ್ತೂರು ಚನ್ನಮ್ಮನವರ 196ನೇ ಸ್ಮರಣೋತ್ಸವವನ್ನು ಫೆಬ್ರವರಿ 2 ರಂದು ಬೈಲಹೊಂಗಲದಲ್ಲಿರುವ ಚನ್ನಮ್ಮಾಜಿ ಐಕ್ಯಸ್ಥಳದಲ್ಲಿ ಅರ್ಥಪೂರ್ಣವಾಗಿ ಸರಕಾರದಿಂದ ಆಚರಿಸುವಂತೆ ಆಗ್ರಹಿಸಿ ವೀರ ರಾಣಿ ಕಿತ್ತೂರ ಚನ್ನಮ್ಮನ ಸ್ಮರಣೋತ್ಸವ ಸಮಿತಿ, ರಾಜಕೀಯ ಮುಖಂಡರು, ವಿವಿಧ ಸಂಘಟನೆ, ಸಮಾಜದ ಪದಾಧಿಕಾರಿಗಳು ಪಕ್ಷ ಮತ್ತು ಜಾತಿ ಬೇದವಿಲ್ಲದೆ ಚನ್ನಮ್ಮನವರ ನೂರಾರು ಅಭಿಮಾನಿಗಳು ಉಪವಿಭಾಗಧಿಕಾರಿಗಳ ಮೂಲಕ,ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಗೆ ಚನ್ನಮ್ಮನ ಐಕ್ಯ ಸ್ಥಳದಲ್ಲಿ ಮನವಿ ಪತ್ರ ನೀಡಿ ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಾ.ವಿ.ಆಯ್. ಪಾಟೀಲ ಮತ್ತು ಮಹಾಂತೇಶ ದೊಡಗೌಡರ ಮಾತನಾಡಿ, ಕಿತ್ತೂರು ನಾಡಿನ ಹಾಗೂ ದೇಶದ ಪ್ರಥಮ ಸ್ವಾತಂತ್ರ್ಯ ಹೊರಾಟಗಾರ್ತಿ ಕ್ರಾಂತಿವೀರ ರಾಷ್ಟ್ರಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮನ 200ವರ್ಷದ ವಿಜಯೋತ್ಸವ ಕಿತ್ತೂರು ನಾಡಿನಲ್ಲಿ ಅದ್ದೂರಿಯಾಗಿ ಆಚರಣೆಯಾಗಿರುವದು ಶ್ಲಾಘನೀಯ. ಚನ್ನಮ್ಮ ವೀರ ಮರಣಹೊಂದಿ 02 ಫೆಬ್ರವರಿ 2025ಕ್ಕೆ 196 ವರ್ಷಗಳಾಗಿವೆ.
ಆದರೆ, ಚನ್ನಮ್ಮಾಜಿಯ ವೀರಸಮಾಧಿ ಸ್ಥಳ ಬೈಲಹೊಂಗಲದಲ್ಲಿ ಸ್ಮರಣೋತ್ಸವ ಸಂದರ್ಭದಲ್ಲಿ ಸರ್ಕಾರ ಯಾವುದೆ ಕಾರ್ಯಕ್ರಮ ಹಮ್ಮಿಕೊಳ್ಳುವದಿಲ್ಲ. ವೀರರಾಣಿ ಕಿತ್ತೂರು ಚನ್ನಮ್ಮನವರ ಸ್ಮರಣೋತ್ಸವ ಸಮಿತಿಯಿಂದ ಪ್ರತಿವರ್ಷ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದು ಅದಕ್ಕೆ ಅಲ್ಪ ಸ್ವಲ್ಪ ಸಹಕಾರ ಸರ್ಕಾರದಿಂದ ದೊರೆತಿದ್ದನ್ನು ಬಿಟ್ಟರೆ ಸಂಪೂರ್ಣವಾಗಿ ಆಚರಣೆ ಮಾಡಿದಿರುವದು ಖೇದಕರವಾಗಿದೆ.
ಆದ್ದರಿಂದ ಫೆಬ್ರುವರಿ 02ರಂದು ಬೈಲಹೊಂಗಲದಲ್ಲಿರುವ ಕಿತ್ತೂರು ಚನ್ನಮ್ಮನ ಐಕ್ಯ ಸ್ಥಳದ ಮುಂದೆ ನಡೆಯುವ ಹಾಗೂ ಐಕ್ಯ ಜ್ಯೋತಿ ಯಾತ್ರೆಯನ್ನು ಸರ್ಕಾರ ಸಂಪೂರ್ಣವಾಗಿ ತೆಗೆದುಕೊಂಡು ಆಚರಣೆ ಮಾಡಬೇಕೆಂದು ಆಗ್ರಹಿಸಿದರು.
ಮಾಜಿ ಜಿಪಂ ಸದಸ್ಯ ಶಂಕರ ಮಾಡಲಗಿ, ಉದ್ಯಮಿ ವಿಜಯ ಮೆಟಗುಡ್ಡ್, ಚಲನಚಿತ್ರ ನಟ ಸಿ.ಕೆ.ಮೆಕ್ಕೆದ ಮಾತನಾಡಿ, ಸರ್ಕಾರ ಫೆಬ್ರುವರಿ1 ರಂದೆ ಚನ್ನಮ್ಮನ ಐಕ್ಯ ಸ್ಥಳ ಹಾಗೂ ಚನ್ನಮ್ನವರ ಅಶ್ವರೂಢ ಮೂರ್ತಿಯನ್ನು ಸ್ವಚ್ಚತೆಗೊಳಿಸಿ ಪಟ್ಟಣದ ಪ್ರಮುಖ ಬೀದಿಗಳನ್ನ ಅಲಂಕಾರ ಮಾಡಬೇಕೆಂದರು.
ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಎಮ್.ಆರ್.ಮೆಳವೆಂಕಿ, ಪಂಚಮಸಾಲಿ ತಾಲುಕಾ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ, ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರಗೇಶ ಗೂಂಡ್ಲರ, ಪತ್ರಕರ್ತ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ, ಪಂಚಮಸಾಲಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ ಮಾತನಾಡಿ, ಫೆಬ್ರುವರಿ 02 ರಂದು ಐಕ್ಯ ಜ್ಯೋತಿ ತರಲೂ ಕಾಕತಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಚನ್ನಮ್ಮನ ಅಭಿಮಾನಿಗಳು ಆಗಮಿಸಬೇಕು, ಚನ್ನಮ್ಮನವರ ಜನ್ಮಸ್ಥಳ ಕಾಕತಿಯಲ್ಲಿ ವೀರಮಾತೆಯ ಮೂರ್ತಿಯನ್ನು ಅಲಂಕಾರಗೊಳಿಸಿ ಜಿಲ್ಲಾಆಡಳಿತ ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಅಲ್ಲಿಯ ಪಂಚಾಯತಿ, ಶಾಲಾ ಮಕ್ಕಳು ಭಾಗವಹಿಸಿ ಐಕ್ಯಜ್ಯೋತಿ ಯಾತ್ರೆಯನ್ನು ಪ್ರಾರಂಭಿಸಬೇಕು.
ನಂತರ ಬೆಳಗಾವಿ ಚನ್ನಮ್ಮ ವೃತ್ತ, ಬಾಗೆವಾಡಿ ಬಸವೇಶ್ವರ ವೃತ್ತದ ಮಾರ್ಗವಾಗಿ ಚನ್ನಮ್ಮನ ಕಿತ್ತೂರಿಗೆ ಆಗಮಿಸಿ ವಾಡೆಯಲ್ಲಿ ಚನ್ನಮ್ಮನವರ ಪೂಜಾ ಗದ್ದುಗೆಯ ಮೇಲೆ ಐಕ್ಯ ಜ್ಯೋತಿ ಪೂಜಾ ಕಾರ್ಯಕ್ರಮ ಜರುಗಿ ರಾಯಣ್ಣನ ಸಂಗೊಳ್ಳಿ, ಬಾಳಪ್ಪನವರ ಅಮಟೂರ ಗ್ರಾಮದಿಂದ ಬೈಲಹೊಂಗಲ ಚನ್ನಮನವರ ವೃತ್ತಕ್ಕೆ ಐಕ್ಯ ಜ್ಯೋತಿ ಯಾತ್ರೆ ಆಗಮಿಸಲಿದ್ದು ಈ ಎಲ್ಲ ಸ್ಥಳಗಳಲ್ಲಿ ಸ್ವಚ್ಚತಾ ಹಾಗೂ ಅಲಂಕಾರ ಕೈಗೊಳ್ಳುವ ಜೋತೆಗೆ ಸ್ಥಳೀಯ ಸರ್ಕಾರದ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಶಾಲಾ ಮಕ್ಕಳು ಭಾಗವಹಿಸಿಲು ಕ್ರಮ ಕೈಗೊಳ್ಳಬೇಕು.
ಜಿಲ್ಲಾಡಳಿತ ಸಂಪೂರ್ಣವಾಗಿ ಐಕ್ಯ ಜ್ಯೋತಿ ಯಾತ್ರಗೆ ರಕ್ಷಣೆ ಒದಗಿಸಬೇಕು. ಸ್ಮರಣೋತ್ಸವದಂದು ಚನ್ನಮ್ಮನವರ ಐಕ್ಯಸ್ಥಳದಲ್ಲಿ ಭವ್ಯವಾದ ಸಮಾರೋಪ ಸಮಾರಂಭವನ್ನು ಹಮ್ಮಿಕೊಂಡು ನಾಡಿನ ಪೂಜ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಚಿಂತಕರು ಕಲಾವಿದರು ಭಾಗವಹಿಸಿ ಚನ್ನಮ್ಮನ ಇತಿಹಾಸದ ಪರಿಚಯ ಹಾಗೂ ನುಡಿನಮನ, ಚನ್ನಮ್ಮನ ಮೇಲಿನ ಜಾನಪದ, ರಾಷ್ಟ್ರಾಭಿಮಾನದ ಸಾಹಿತ್ಯ ಒಳಗೊಂಡ ಸಂಗೀತ ಕಾರ್ಯಕ್ರಮವನ್ನು ನಾಡಿನ ಖ್ಯಾತ ಕಲಾವಿದರಿಂದ ಆಯೋಜಿಸಿ, ಐಕ್ಯ ಸ್ಥಳದಲ್ಲಿ ಲೇಜರ್ ಶೋ, ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸಮಸ್ತ ಚನ್ನಮ್ಮನ ಅಭಿಮಾನಿಗಳ ಪರವಾಗಿ ಸರ್ಕಾರವನ್ನು ಆಗ್ರಹಿಸಿದರು.
ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು. ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಕಮಿಷನರ್ ಬೈಲಹೊಂಗಲ ಮತ್ತು ಚನ್ನಮ್ಮನ ಕಿತ್ತೂರು ಶಾಸಕರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಮ್.ವಾಯ್.ಸೊಮಣ್ಣವರ, ಜಿ.ಬಿ.ಶಿಗಿಹಳ್ಳಿ, ಶಂಕರೆಪ್ಪ ಯಡಹಳ್ಳಿ, ಶಿವಾನಂದ ಬೆಳಗಾವಿ, ಮಾಜಿ ಸೈನಿಕ ಸಂಘದ ಅಧ್ಯಕ್ಷ ಬಿ.ಬಿ.ಬೋಗೂರ, ಸೋಮೇಶ್ವರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ವಿ ಎಚ್ ಪಿ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಮಿತಿ ಅಧ್ಯಕ್ಷ ಸೋಮನಾಥ ಸೊಪ್ಪಿಮಠ, ಜೈನ ಸಮಾಜದ ಮುಖಂಡ ಸುದರ್ಶನ ಉಪಾಧ್ಯಯ, ಚಂದುಲಾಲ ಜೈನ್, ದೆವಾಂಗ ಸಮಾಜದ ಮುಖಂಡ ದಲಿತ ಸಂಘರ್ಷ ಸಮಿತಿ ಮುಖಂಡ ಸಂಜುಕುಮಾರ ಮುರಗೋಡ, ಬಿ.ಬಿ.ಸಂಗನಗೌಡರ, ಶ್ರೀಕಾಂತ ಶಿರಹಟ್ಟಿ, ಸುಭಾಷ ತುರಮರಿ, ಅಜೀತ ಕೊಟಗಿ, ಸಿದ್ದಾರೂಡ ಹೊಂಡಪ್ಪನವರ, ಶ್ರೀಶೈಲ ಶರಣಪ್ಪನವರ, ಬಿ.ಬಿ.ಗಣಾಚಾರಿ, ಮಹಾಂತೇಶ ಅಕ್ಕಿ, ರಾಜು ನರಸಣ್ಣವರ, ಸಂತೋಷ ಕೊಳವಿ, ಚಂದ್ರಶೇಖರ್ ಕೊಪ್ಪದ, ಮಹಾಂತೇಶ ಕಮತ, ಗೂಳಪ್ಪ ಹೊಳಿ, ಅಶೋಕ ಹುದ್ದಾರ, ಬಸವರಾಜ ದೋತರದ, ಅನೀಲ ಕರಬಣ್ಣವರ, ಚಂದ್ರು ವಣ್ಣುರ, ಮಲ್ಲಿಕಾರ್ಜುನ ಕರಡಿಗುದ್ದಿ ಮೋಹನ ವಕ್ಕುಂದ ಸೇರಿದಂತೆ ನೂರಾರು ಚನ್ನಮ್ಮನ ಅಭಿಮಾನಿಗಳು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ