Film & EntertainmentKannada NewsKarnataka News

*ರೇಣುಕಾಸ್ವಾಮಿ ಕೊಲೆ ಕೇಸ್: ಆರೋಪಿ ತಂದೆ ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನ ಆಗಿರುವ 17 ಜನ ಆರೋಪಿಗಳ ಪೈಕಿ 7ನೇ ಆರೋಪಿ ತಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 

Home add -Advt

ನಟ ದರ್ಶನ್​​​​​ ಮತ್ತು ಟೀಂನಿಂದ ಅಪಹರಣ ಮಾಡಿ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಹತ್ಯೆಗೈದ ಆರೋಪ ಪ್ರಕರಣ ಸಂಬಂಧ ಇಂದು 7ನೇ ಆರೋಪಿ ಅನುಕುಮರ್​ ಎಂಬಾತ ಪೊಲೀಸರಿಗೆ ಶರಣಾಗಿದ್ದನು. ಪ್ರಕರಣದಿಂದ ನೊಂದು ಕುಸಿದುಬಿದ್ದ ಆರೋಪಿ ಅನುಕುಮಾರ್​​ ತಂದೆ ಚಂದ್ರಪ್ಪ (55) ಎಂಬುವವರು ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. 

ಪ್ರಕರಣದಲ್ಲಿ ತನ್ನ ಮಗನ ಹೆಸರು ಕೇಳಿಬಂದಿದ್ದಕ್ಕೆ ಅವಮಾನಗೊಂಡು ಕುಸಿದು ಬಿದ್ದ ಅವರನ್ನು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಅಸುನೀಗಿದ್ದಾರೆ. ಸದ್ಯ ಮನೆಯ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Related Articles

Back to top button