Belagavi NewsBelgaum NewsEducationKannada NewsKarnataka NewsLatest

*ನಿವೃತ್ತ ಡಿಡಿಪಿಐ ಹಳಿಂಗಳಿ ನಿಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ನಿವೃತ್ತ ಡಿಡಿಪಿಐ ಎಸ್. ವಾಯ್. ಹಳಿಂಗಳಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

4 ದಿನಗಳ ಹಿಂದೆ ಬೆಳಗಾವಿಯಲ್ಲಿ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಡಿದ್ದ ಹಳಿಂಗಳಿ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕೋಮಾದಿಂದ ಮರಳದೆ ಅವರು ಶುಕ್ರವಾರ ಸಾವಿಗೀಡಾದರು.

Home add -Advt

ಅವರ ಅಂತ್ಯ ಕ್ರಿಯೆ ಶನಿವಾರ ಮುಂಜಾನೆ 10-30 ಕ್ಕೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸ್ವಗ್ರಾಮ ಉಪ್ಪಲದಿನ್ನಿಯಲ್ಲಿ ನಡೆಯಲಿದೆ.

ಪತಿ ಪತ್ನಿ ಇಬ್ಬರೂ ಕ್ಲಾಸ್ ಒನ್ ಅಧಿಕಾರಿಗಳಾಗಿದ್ದರು. ಆದರೆ ಸುಮಾರು ಐದು ವರ್ಷಗಳ ಹಿಂದೆ ಕಾರಿನ ಡೋರ್ ಓಪನ್ ಆಗಿ ಹೆಂಡತಿ, ಬಿಇಡಿ ಕಾಲೇಜ್ ಉಪನ್ಯಾಸಕಿ ಜಯಶ್ರೀ ಬಿರಾದಾರ ಮೃತಪಟ್ಟಿದ್ದರು. ಹಳಿಂಗಳಿ ಅವರು ಹೃದಯ ಕಾಯಿಲೆಯಿಂದ ಸಹ ಬಳಲುತ್ತಿದ್ದರು. ಜನಸ್ನೇಹಿ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

Related Articles

Back to top button