Belagavi NewsBelgaum NewsKarnataka News

*ಬ್ಯಾನರ್ ಕಟ್ಟಲು ಎಲ್ಲರಿಗೂ ಅವಕಾಶವಿದೆ ಎಂದ ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಗೋಕಾಕ್ ನಲ್ಲಿ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಬ್ಯಾನರ್ ಕಟ್ಟಲು ಎಲ್ಲರಿಗೂ ಅವಕಾಶವಿದೆ ಎಂದಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಮಾತನಾಡಿದ ಸಚಿವ ಸಚಿವ ಸತೀಶ್ ಜಾರಕಿಹೊಳಿ‌, ಬ್ಯಾನರ್ ಕಟ್ಟಲು ಎಲ್ಲರಿಗೂ ಅವಕಾಶ ಕೊಡಬೇಕು ಎಂದು ಹೇಳಿದ್ದೇವೆ. ಇದು ರಾಜಕೀಯ ತುರುಸಲ್ಲ, ಇದು ಜಾತ್ರೆ, ಎಲ್ಲ ಪಕ್ಷದವರು ಭಾಗವಹಿಸುತ್ತಾರೆ. ಬ್ಯಾನರ್ ಮುಕ್ತ ಮಾಡಲು ಆಗಲ್ಲ, ಎಲ್ಲರೂ ಬ್ಯಾನರ್ ಹಾಕುತ್ತಾರೆ, ಹಾಗಾಗಿ ಎಲ್ಲರಿಗೂ ಅವಕಾಶ ಕೊಡಬೇಕು ಎಂದರು.

ಅವರ ಮನೆ, ಅಂಗಡಿ ಮುಂದೆ ಬ್ಯಾನರ್ ಹಚ್ಚೋಕೆ ಯಾರ ಪರ್ಮಿಷನ್ ಬೇಕಿಲ್ಲ. ಎಲ್ಲರಿಗೂ ಮುಕ್ತ ಅವಕಾಶ ಕೊಡುತ್ತೇವೆ ಎಂದರು. ಜಾತ್ರೆಯ ಸಮಯದಲ್ಲಿ ಫಾಲ್ಸ್ ಬಳಿ ಪೊಲೀಸ್ ನಿಯೋಜನೆ ಮಾಡುತ್ತೇವೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button