Latest

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಸಚಿವ ಶಿವರಾಮ ಹೆಬ್ಬಾರ

ಪ್ರಗತಿವಾಹಿನಿ ಸುದ್ದಿ; ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವನ್ನು ಪಕ್ಷಾತೀತವಾಗಿ ಮಾಡುವದಾಗಿ ರಾಜ್ಯ ಕಾರ್ಮಿಕ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕೋವಿಡ್-19 ನಿವಾರಣೆ, ಪ್ರವಾಸೋದ್ಯಮ, ಜನರಿಗೆಉದ್ಯೋಗ ಮತ್ತು ಆಹಾರ ಭದ್ರತೆ, ಕೇಂದ್ರ ಮತ್ತುರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ತಳಮಟ್ಟದ ವರ್ಗದವರಿಗೂ ಮುಟ್ಟಿಸುವ ಪ್ರಯತ್ನದೊಂದಿಗೆ, ಮೀನುಗಾರಿಕೆ, ಬಂದರುಗಳ ಮೇಲ್ದರ್ಜೆ ಹಾಗೂ ಏರ್‌ಪೋರ್ಟ ಸ್ಥಾಪನೆಯಂತಹ ಕೆಲಸಗಳನ್ನು ನಿರ್ವಹಿಸುವುದರ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಜನಪರ ಆಡಳಿತಕ್ಕೆ ಒತ್ತು ನೀಡಲಾಗುವುದು ಎಂದರು.

ಕೋವಿಡ್ ಸಂಕಷ್ಟದ ಅವಧಿಯಲ್ಲಿ ಎದುರಾದ ಸವಾಲುಗಳನ್ನೇ ಸಾಧನೆಗಳನ್ನಾಗಿ ಪರಿವರ್ತಿಸಿ ಅನೇಕ ಕಾರ್ಯಕ್ರಮಗಳನ್ನುಜಿಲ್ಲೆಯಜನರಿಗೆ ನೀಡಲಾಗಿದೆ. ವಿಶೇಷವಾಗಿ ಕೋವಿಡ್-19 ಟೆಸ್ಟ್ ಹಾಗೂ ಆರ್‌ಟಿಪಿಸಿಆರ್ ಪ್ರಯೋಗಾಲಯ ಹಾಗೂ ಆಕ್ಸಿಜನ್ ಘಟಕಗಳ ಸ್ಥಾಪನೆ ಮತ್ತು ಸಂಕಷ್ಟದಲ್ಲಿದ್ದಂತಹ ಜನರಿಗೆ ಆಹಾರ ಕಿಟ್‌ಗಳನ್ನು ನೀಡುವಂತಹ ಕಾರ್ಯಗಳನ್ನು ಪಕ್ಷಾತೀತವಾಗಿ ಮಾಡಲಾಗಿದೆ.

ಕೋವಿಡ್ ಮೊದಲ ಅಲೆ ಸಂದರ್ಭದ ಸಂಕಷ್ಟದಲ್ಲಿದ್ದ ಜಿಲ್ಲೆಯಲ್ಲಿನ ೬೫,೩೭೧ ಕಟ್ಟಡ ಮತ್ತುಇತರೆ ನಿರ್ಮಾಣಕಾರ್ಮಿಕರಿಗೆಒಂದು ಬಾರಿ ಪರಿಹಾರಧನಸಹಾಯವಾಗಿ ೫ ಸಾವಿರದಂತೆಒಟ್ಟು ಮೂವತ್ತೆರಡುಕೋಟಿಅರವತ್ತೆಂಟು ಲಕ್ಷದಐವತೈದು ಸಾವಿರ ( ೩೨,೬೮,೫೫,೦೦೦) ರೂಗಳನ್ನು ಕಾರ್ಮಿಕರ ಖಾತೆಗಳಿಗೆ ನೇರವಾಗಿ ಬ್ಯಾಂಕ್‌ನ ಮೂಲಕ ಹಣ ಸಂದಾಯ ಮಾಡಲಾಗಿದೆ. ಹಾಗೇನೆ ಎರಡನೇ ಅಲೆ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದಕಾರ್ಮಿಕರಿಗೆಒAದು ಬಾರಿ ಪರಿಹಾರಧನಸಹಾಯವಾಗಿ ೩ ಸಾವಿರದಂತೆ ೪೯,೦೫೪ ಕಾರ್ಮಿಕರಖಾತೆಗೆಒಟ್ಟು ಮೊತ್ತ ಹದಿನಾಲ್ಕು ಕೋಟಿಎಪ್ಪತ್ತೊಂದು ಲಕ್ಷದಅರವತ್ತೆರಡು ಸಾವಿರ (೧೪,೭೧,೬೨,೦೦೦) ರೂಗಳನ್ನು ಡಿ.ಬಿ.ಟಿ ಮೂಲಕ ನೇರವಾಗಿಕಾರ್ಮಿಕರಖಾತೆಗೆ ಹಣಜಮಾ ಮಾಡಲಾಗಿದೆಎಂದರು.

ಮೂರನೆ ಅಲೆ ಸಿದ್ದತೆಗಾಗಿ ೨೮೪ ಆಮ್ಲಜನಕ ಸಹಿತ ಪ್ರತ್ಯೇಕ ಹಾಸಿಗೆ, ೧೮೮೮ ಪ್ರತ್ಯೇಕ ಹಾಸಿಗೆ ಹಾಗೂ ೨೮೪ ಸರ್ಪೋಟೆಡ್ ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ೧೦೪ ವೆಂಟಿಲೇರ‍್ಸ್ ಹಾಗೂ ೧೫೫ ಐಸಿಯು ಹಾಸಿಗೆ ಮತ್ತು ೫೨ ಮಕ್ಕಳ ವಿಶೇಷ ಐಸಿಯು ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿರುತ್ತದೆ.

ಜಿಲ್ಲೆಯಲ್ಲಿನ ಕರೋನಾ ರೋಗಿಗಳಿಗೆ ಆಕ್ಸಿಜನ್‌ ಕೊರತೆಯನ್ನು ನೀಗಿಸಲು ಮಹತ್ತರವಾದ ಹೆಜ್ಜೆಯನ್ನು ಇಡಿಲಾಗಿದೆ. ಈಗಾಗಲೇ ೬ ಕೆಎಲ್ ಪ್ಲಾಂಟ್ಸ್ ಕಿಮ್ಸ್ ನಲ್ಲಿ ಸ್ಥಾಪನೆ ಮಾಡಿದ್ದು, ಶಿರಸಿ ಹಾಗೂ ಭಟ್ಕಳಗಳಲ್ಲಿ ೬ ಕೆಎಲ್ ಪ್ಲಾಂಟ್ಸ್ ಸ್ಥಾಪಿಸಲು ಪ್ರಸ್ಥಾವನೆ ಸಲ್ಲಿಸಿದ್ದು, ಜಿಲ್ಲೆಯಎಲ್ಲಾ ತಾಲೂಕುಗಳಲ್ಲೂ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಈಗಾಗಲೇ ಯಲ್ಲಾಪುರದಲ್ಲಿ ಆಕ್ಸಿಜನ್‌ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದು ಕಾರ್ಯಾರಂಭ ಮಾಡಿದೆ. ಶಿರಸಿ, ಕಾರವಾರ, ಭಟ್ಕಳದಲ್ಲಿ ಸ್ಥಾಪನೆಯಾಗಿದೆ. ಒಟ್ಟಾರೆಯಾಗಿ ೩ನೇ ಅಲೆ ಬಂದಲ್ಲಿ ಜಿಲ್ಲೆಯಲ್ಲಿ ಆಕ್ಸಿಜನ್‌ ಕೊರತೆ ಉಂಟಾಗದಂತೆಎಲ್ಲಾ ಮುಂಜಾಗೃತಾ ಕ್ರಮಕೈಗೊಳ್ಳಲಾಗಿದೆ ಎಂದರು.

ಕೋವಿಡ್ ನಿವಾರಣೆಯ ಸಂಕಷ್ಟದ ಸಮಯದಲ್ಲೇ ಪ್ರಕೃತಿ ಮುನಿಸಿಕೊಂಡಿದ್ದು ಜಿಲ್ಲೆಯಲ್ಲಿ ಎಂದೂ ಕಂಡರಿಯದ ಪ್ರಾಕೃತಿಕ ವಿಕೋಪ ಕೂಡ ಸಂಭವಿಸಿದೆ. ಇದನ್ನು ಎದೆಗುಂದದೇ ಯಶಸ್ವಿಯಾಗಿ ನಿಬಾಯಿಸಲಾಗಿದೆ. ನನ್ನ ವಿನಂತಿಯ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡ ಮರು ದಿನವೇ ಜಿಲ್ಲೆಗೆ ಭೇಟಿ ನೀಡಿ ೨೧೦ ಕೋಟಿ ರೂಪಾಯಿಗಳನ್ನು ಘೋಷಿಸಿರುತ್ತಾರೆ. ೨೦೨೧ರ ಮೇ ತಿಂಗಳಲ್ಲಿ ತೌಖ್ತೆಚಂಡಮಾರುತ ಅಪ್ಪಳಿಸಿ ಜಿಲ್ಲೆಯಲ್ಲಿನ ೧೧೦ ಮನೆಗಳಿಗೆ ಸಮುದ್ರದ ನೀರು ನುಗ್ಗಿ ಹಾನಿಯಾಗಿದ್ದು, ಇದಕ್ಕೆರೂ ೪.೧೭೪ ಲಕ್ಷ ಪರಿಹಾರ ವಿತರಿಸಲಾಗಿದೆಎಂದುಅವರು ಹೇಳಿದರು.

ಅದೇರೀತಿ ಜುಲೈ ಮಾಹೆಯಲ್ಲಿ ಅತೀವೃಷ್ಟಿಯಿಂದ ಅಪಾರ ಹಾನಿ ಉಂಟಾಗಿದ್ದು ಈ ಪ್ರವಾಹ ಹಾನಿಯಲ್ಲಿ ೨೪೮ ಪೂರ್ಣ ಪ್ರಮಾಣ, ೨೫೦ ತೀವ್ರತರ ಹಾಗೂ ೧೨೮೨ ಭಾಗಶಃದಂತೆ ಒಟ್ಟು ೧೭೮೦ ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ ಪೂರ್ಣ ಪ್ರಮಾಣದಲ್ಲಿ ಹಾನಿಯಾದ ೧೬೮ ಮನೆಗಳಿಗೆ ೧೫೯.೭೫ ಲಕ್ಷ, ತೀವ್ರತರದ ೧೧೦ ಮನೆಗಳಿಗೆ ೧೩೫.೧ ಲಕ್ಷ, ಭಾಗಶಃ ೫೧೬ ಮನೆಗಳಿಗೆ ೨೪ ಲಕ್ಷ, ಒಟ್ಟು ೭೯೪ ಮನೆಗಳಿಗೆ ೩೧೮ ಲಕ್ಷರೂ ಪರಿಹಾರ ವಿತರಿಸಲಾಗಿದೆ. ೮೨೦೫ ಅನಧಿಕೃತ ಮನೆಗಳಿಗೆ ನೀರು ನುಗ್ಗಿ ಬಟ್ಟೆ ಪಾತ್ರೆಗಳು ಹಾನಿಯಾಗಿದ್ದು, ೮೧೩೧ ಕುಟುಂಬಗಳಿಗೆ ತಲಾ ೩೮೦೦ ರೂ ಗಳಂತೆ ಒಟ್ಟು ೩೦೯ ಲಕ್ಷ ಪರಿಹಾರ ವಿತರಿಸಲಾಗಿದೆ.

ಪ್ರಕೃತಿ ವಿಕೋಪ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಸರಕಾರಕ್ಕೆ ೨೫ ಕೋಟಿಅನುದಾನ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಮೂಲಭೂತ ಸೌಕರ್ಯ ಹಾನಿಗೆ ಸಂಬಂಧಿಸಿದಂತೆ ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ೧೦೬೧೯.೩೫ ಲಕ್ಷ ಲೋಕೋಪಯೋಗಿ ಇಲಾಖೆಯಲ್ಲಿ ೪೦೧೪೪.೧೫ ಲಕ್ಷ ಅಂದಾಜು ಮೊತ್ತ ಹಾನಿಯಾಗಿದ್ದು, ಸರ್ಕಾರದಿಂದ ೧೦೦ ಕೋಟಿ ರೂ. ಅನುದಾನ ಮಂಜೂರಾಗಿದೆ. ಅದೇರೀತಿ ರಾಷ್ಟಿಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟಂತೆ ೯೬೦೦ ಲಕ್ಷ ಅಂದಾಜು ಮೊತ್ತ ಹಾನಿಗೊಂಡಿದ್ದು ೧೦ ಕೋಟಿ ಅನುದಾನದ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ೮ನೇ ಕರ್ನಾಟಕ ನೇವಲ್‌ಯೂನಿಟ್, ಚೆಂಡಿಯಾ ಘಟಕದ ಗೃಹ ರಕ್ಷಕ ದಳ, ಅರಣ್ಯ ಇಲಾಖೆ, ಮಹಿಳಾ ಪೊಲೀಸ್‌ತುಕಡಿ ಮತ್ತು ಕಾರವಾರ ಉಪ ವಿಭಾಗದ ನಾಗರಿಕ ಪೊಲೀಸ್‌ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು. ಕೋವಿಡ್ ೧೯ ಕರೋನಾ ವಾರಿಯರ್ಸ್ಗಳಿಗೆ ಸನ್ಮಾನ ನಂತರಕಟ್ಟಡಕಾರ್ಮಿಕರು ಮತ್ತು ಅಸಂಘಟಿತಕಾರ್ಮಿಕರಿಗೆ ಮಂಜೂರಾಗಿರುವಅಪಘಾತ ಪರಿಹಾರಧನ ಮತ್ತು ವೈಧ್ಯಕೀಯ ಹಾಗೂ ಧನ ಸಹಾಯದಚೆಕ್ ವಿತರಣೆ ಮಾಡಲಾಯಿತು. ಶಾಸಕಿ ರೂಪಾಲಿ ನಾಯ್ಕ,ಕಾರವಾರ ನಗರಸಭೆಅಧ್ಯಕ್ಷಡಾ. ನಿತಿನ ಪಿಕಳೆ, ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪ್ರಿಯಾಂಗಾ ಎಂ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್. ಕೆ. ಎಸಿ ವಿದ್ಯಾಶ್ರಿ ಚಂದರಗಿ ಸೇರಿದಂತೆ. ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button