Kannada NewsKarnataka NewsLatest

ಕಾಕತಿ, ಹಿರೇಬಾಗೇವಾಡಿ: ನೂತನ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಾಕತಿ ಪೊಲೀಸ್ ಠಾಣೆಯ ಆವರಣದಲ್ಲಿ ಮತ್ತು  ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಪೊಲೀಸ್ ವಸತಿ ಗೃಹಗಳನ್ನು ರಾಜ್ಯ ಗೃಹ ಸಚಿವಬಸವರಾಜ ಬೊಮ್ಮಾಯಿ ಉದ್ಘಾಟಿಸುವರು.

ಶನಿವಾರ ಕಾಕತಿ ಮತ್ತು ಭಾನುವಾರ ಹಿರೇಬಾಗೇವಾಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

Home add -Advt

ಉಪ ಮುಖ್ಯಮಂತ್ರಿ  ಲಕ್ಷ್ಮಣ ಸವದಿ,  ಕೇಂದ್ರ ಸಚಿವ ಸುರೇಶ ಅಂಗಡಿ,  ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವೆ  ಶಶಿಕಲಾ ಜೊಲ್ಲೆ  ಆಗಮಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಡಾ. ರಜನೀಶ ಗೋಯಲ್,  ನೀಲಮಣಿ ಎನ್ ರಾಜು, ರಾಘವೇಂದ್ರ ಔರಾದ್ಕರ,  ಅಮರ್ ಕುಮಾರ ಪಾಂಡೆ,  ಆಮ್ಲಾನ್ ಆದಿತ್ಯ ಬಿಸ್ವಾಸ್,  ಹೆಚ್ ಜಿ. ರಾಘವೇಂದ್ರ ಸುಹಾಸ್,  ಡಾ. ಎಸ್ ಬಿ ಬೊಮ್ಮನಹಳ್ಳಿ, ಡಾ. ರಾಜೇಂದ್ರ ಕೆ. ವಿ. ಸಹ ಪಾಲ್ಗೊಳ್ಳುವರು.
ಇದರೊಂದಿಗೆ ವಿಶೇಷ ಆಮಂತ್ರಿತರಾಗಿ  ಮಹಾಂತೇಶ ಕವಟಗಿಮಠ  ಪಿ. ರಾಜೀವ ,  ಆಶಾ ಐಹೊಳೆ  ಶಂಕರಗೌಡಾ ಪಾಟೀಲ,  ಅನಂತಕುಮಾರ ಹೆಗಡೆ,  ಡಾ. ಪ್ರಭಾಕರ ಕೋರೆ ಸಹ ಆಗಮಿಸುವರು.   ಕಾಕತಿ ಠಾಣಾ ಪೊಲೀಸ್ ವಸತಿ ಗೃಹಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು  ಅನೀಲ ಎಸ್ ಬೆನಕೆ ವಹಿಸಲಿದ್ದು, ಹಿರೇಬಾಗೇವಾಡಿ ಠಾಣಾ ಪೊಲೀಸ್ ವಸತಿ ಗೃಹಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು  ಲಕ್ಷ್ಮೀ ಆರ್. ಹೆಬ್ಬಾಳಕರ  ವಹಿಸಲಿದ್ದಾರೆ.

Related Articles

Back to top button