Latest

*ನಾಯಿಮರಿ ಹೇಳಿಕೆಗೆ ಸಮಜಾಯಿಷಿ ಕೊಟ್ಟ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಧಾನಿ ಮೋದಿ ಮುಂದೆ ನಾಯಿಮರಿಯಂತೆ ಇರ್ತಾರೆ ಎಂಬ ತಮ್ಮ ಹೇಳಿಕೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದು, ನಾನು ಹೇಳಿದ್ದು ಬೇಎ ಅರ್ಥದಲ್ಲಿ ಸದುದ್ದೇಶದಿಂದ ಹೇಳಿರುವುದು ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ವಿರುದ್ಧ ತಾವು ನೀಡಿದ್ದ ಹೇಳಿಕೆ ಸದುದ್ದೇಶದಿಂದಲೇ ಹೇಳಿದ್ದೇನೆ. ರಾಜ್ಯದ ಹಿತದೃಷ್ಟಿಯಿಂದ ಸಿಎಂ ಧೈರ್ಯತೋರಬೇಕು ಎಂದು ಹೇಳಿದ್ದೇನೆ ಎಂದರು.

Home add -Advt

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಮರ್ಪಕವಾಗಿ ಅನುದಾನ ಬಂದಿಲ್ಲ. ಅನುದಾನ ಕಡಿಮೆಯಾಗಿದೆ. ಮುಖ್ಯಮಂತ್ರಿಗಳು ಕೇಂದ್ರದ ಬಳಿ ಈ ಬಗ್ಗೆ ಕೇಳಬೇಕು. ಹಾಗಾಗಿ ಧೈರ್ಯದಿಂದ ಪ್ರಧಾನಿ ಬಳಿ ಮಾತನಾಡಬೇಕು ಎಂಬ ಅರ್ಥದಲ್ಲಿ ಹೇಳಿದ್ದೇನೆ ಹೊರತು ಬೇರೆ ಕಾರಣಕ್ಕಲ್ಲ ಎಂದು ಸಮರ್ಥನೆ ನೀಡಿದ್ದಾರೆ.

ಇದೇ ವೇಳೆ ಸಚಿವ ಶ್ರೀರಾಮುಲು ಸಿದ್ದರಾಮಯ್ಯ ಅವರನ್ನು ಬೆಕ್ಕು, ಇಲಿ, ಜಿರಳೆ ಹಾಗೆ ಎಂದು ಹೇಳಬಹುದೇ ಎಂದು ಟೀಕಿಸಿದ ವಿಚಾರವಾಗಿ ಗರಂ ಆದ ಸಿದ್ದರಾಮಯ್ಯ ಅವನ್ಯಾವ ಪೆದ್ದ, ಅವನ ಬಗ್ಗೆ ಮಾತನಾಡಲ್ಲ, ಬಿಜೆಪಿ ಅಂದ್ರೇನೆ ಸುಳ್ಳಿನ ಕಾರ್ಖಾನೆ. ಪ್ರಧಾನಿ ಮೋದಿಯಿಂದ ಹಿಡಿದು ಸಿಎಂ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್ ಎಲ್ಲರೂ ಸುಳ್ಳು ಹೇಳುವವರೇ. ಸುಳ್ಳು ಹೇಳುವುದೇ ಅವರ ವೃತ್ತಿಯಾಗಿದೆ ಎಂದು ಕಿಡಿಕಾರಿದರು.

*ವಿಧಾನಸೌಧದಲ್ಲಿ 10.5 ಲಕ್ಷ ರೂಪಾಯಿ ಅನಧಿಕೃತ ಹಣ ಪತ್ತೆ; PWD ಸಹಾಯಕ ಇಂಜಿನಿಯರ್ ವಶಕ್ಕೆ*

https://pragati.taskdun.com/vidhanasoudha10-5-lakh-foundpwd-assistant-engineer-arrest/

Related Articles

Back to top button