Latest

*ನಾನು ಆರೋಗ್ಯವಾಗಿದ್ದೇನೆ ಎಂದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಜ್ಞಾನ ಯೋಗಾಶ್ರಮದ ಪೀಠಾಧಿಪತಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯದ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಸ್ವಾಮೀಜಿಯವರೇ ಸ್ವತ: ಸ್ಪಷ್ಟನೆ ನೀಡಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿ ಆರೋಗ್ಯದ ಬಗ್ಗೆ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವದಂತಿಗಳು ಹರಿದಾಡುತ್ತಿದ್ದವು. ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿತ್ತು. ಸಧ್ಯ ವಿಜಯಪುರ ಜ್ಞಾನ ಯೋಗಾಶ್ರಮದಲ್ಲಿ ಎಂದಿನಂತೆ ನಿತ್ಯದ ಪೂಜೆ, ಪುನಸ್ಕಾರಗಳಲ್ಲಿ ತೊಡಗಿರುವ ಸ್ವಾಮೀಜಿ ಇಂದು ಭಕ್ತರಿಗೂ ದರ್ಶನ ನೀಡಿದ್ದಾರೆ. ಸ್ವಾಮೀಜಿ ಆರೋಗ್ಯದಿಂದಾರೆ.

ಇದೇ ವೇಳೆ ಮಾತನಾಡಿದ ಸಿದ್ದೇಶ್ವರ ಸ್ವಾಮೀಜಿ, ನಾನು ಆರೋಗ್ಯದಿಂದ ಇದ್ದೇನೆ. ಯಾವುದೇ ಸಮಸ್ಯೆಯಿಲ್ಲ. ಯಾವ ವದಂತಿಗಳಿಗೂ ಕಿವಿಗೊಡುವುದು ಬೇಡ ಎಂದು ಹೇಳಿದ್ದಾರೆ.

ಚಳಿಗಾಲವಾಗಿರುವುದರಿಂದ ಸ್ವಾಮೀಜಿ ಅವರಿಗೆ ಸ್ವಲ್ಪ ನೆಗಡಿ, ಕೆಮ್ಮು ಇತ್ತು. ಇದನ್ನು ಬಿಟ್ಟು ಬೇರಾವ ಆರೋಗ್ಯ ಸಮಸ್ಯೆಯೂ ಇಲ್ಲ ಭಕ್ತರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಆಶ್ರಮದ ಪ್ರಮುಖರು ಮಾಹಿತಿ ನೀಡಿದ್ದಾರೆ.

Home add -Advt

*ಭೀಕರ ಕಾರು ಅಪಘಾತ; ಮೂವರು ಯುವಕರು ದುರ್ಮರಣ*

https://pragati.taskdun.com/shivamoggacar-lorryaccident3-death/

Related Articles

Back to top button