Kannada NewsLatest

ದೇಗುಲ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದ ಮೊದಲ ಅವಧಿಯಲ್ಲೇ ಈವರೆಗೆ ಆಗದಷ್ಟು ಗರಿಷ್ಠ ಪ್ರಮಾಣದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಜನತೆ ಸಹಕಾರದೊಂದಿಗೆ ಕ್ಷೇತ್ರವನ್ನು ಇನ್ನೂ ಹೆಚ್ಚು ಅಭಿವೃದ್ಧಿ ಕಾರ್ಯಗಳ ಮೂಲಕ ನೈಜ ಮಾದರಿಯಾಗಿ ಮುನ್ನಡೆಸುವ ಗುರಿ ಹೊಂದಿದ್ದೇನೆ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

Home add -Advt

ಅರಳೀಕಟ್ಟಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಅವರು ಈಗಾಗಲೇ 20 ಲಕ್ಷ ರೂ. ಮಂಜೂರು ಮಾಡಿಸಿದ್ದು ಈ ಅನುದಾನದ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕರಪತ್ರಗಳ ವಿತರಣೆಗೆ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಿದರು.

ಈ ಸಮಯದಲ್ಲಿ ಶಿವಮೂರ್ತಿ ಅಜ್ಜನವರು, ಗ್ರಾಮದ ಹಿರಿಯರು, ಸಿ.ಸಿ. ಪಾಟೀಲ ಅಣ್ಣ, ಅಡಿವೇಶ ಇಟಗಿ, ಸಿದ್ದಣ್ಣ ಸಿಂಗಾಡಿ, ಶಿವಾನಂದ ಹಲಕರ್ಣಿಮಠ, ರಾಜು ಉಪ್ಪಾರ, ನಾಗಣ್ಣ ಮೆನೆನಿ, ರಾಜು ಕಟ್ಟಿಕರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

https://pragati.taskdun.com/night-operation-11-lakhs-seized-in-many-places-in-belgaum-district/
https://pragati.taskdun.com/charukeerti-bhattaraka-swamiji-of-shravanabelagol-passed-away/
https://pragati.taskdun.com/distribution-of-bikes-to-students-for-self-reliance/

Related Articles

Back to top button