Politics

*ಬಜೆಟ್ ನಂತರ ರಾಜ್ಯದ ಕರಿಮಣಿ ಮಾಲೀಕ ಯಾರು? ಸದನದಲ್ಲಿ ಸರ್ಕಾರದ ಕಾಲೆಳೆದ ಬಿಜೆಪಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಇದೀಗ ವಿಪಕ್ಷ ಬಿಜೆಪಿ ನಾಯಕರು ಸದನದಲ್ಲಿ ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಸುನೀಲ್ ಕುಮಾರ್, ಸರ್ಕಾರದಲ್ಲಿ ಸಿಎಂ ಕುರ್ಚಿಗಾಗಿ ಕಚ್ಚಾಟ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿಯೇ ಗೊಂದಲವುಂಟಾಗಿದೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ನಿಟ್ಟಿನಲ್ಲಿ ನಾಯಕರು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಗೃಹ ಸಚಿವ ಪರಮೇಶ್ವರ್ ಅವರು ದೆಹಲಿಗೆ ಹೋಗಿ ಬರುತ್ತಾರೆ ನಾನು ಸಿಎಂ ಆಗ್ತೀನಿ ಅಂತಾರೆ. ಮತ್ತೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಅಂತಾರೆ. ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಸಿಎಂ ಕುರ್ಚಿ ಬದಲಾವಣೆ ಬಗ್ಗೆಯೇ ಚರ್ಚೆ ಆರಂಭವಾದರೇ ಜನರಿಗೆ ಆಡಳಿತದ ಬಗ್ಗೆ ಗೊಂದಲವುಂತಾಗುತ್ತಿದೆ ಎಂದು ಗುಡುಗಿದರು.

Home add -Advt

ಆಡಳಿತ ಪಕ್ಷದಲ್ಲಿನ ಚರ್ಚೆ ನೋಡಿದರೆ ಬಜೆಟ್ ನಂತರ ರಾಜ್ಯದ ಕರಿಮಣಿ ಮಾಲೀಕ ಯಾರು? ಎಂಬ ಪ್ರಶ್ನೆ ನಮಗೂ ಮೂಡುತ್ತಿದೆ. ಮೊದಲು ಈ ಅಸ್ಥಿರತೆಯನ್ನು ಹೋಗಲಾಡಿಸಲಿ ಎಂದು ಹೇಳಿದರು.

Related Articles

Back to top button