Latest

3 ರೀತಿಯ ಬಿಜೆಪಿ ಪಟ್ಟಿ!: ಯಾವುದು ಅಸಲಿ? ಯಾವುದು ನಕಲಿ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮಾ.26ರಂದು ಬಿಡುಗಡೆ ಮಾಡಿದ್ದೆನ್ನಲಾದ ಭಾರತೀಯ ಜನತಾಪಾರ್ಟಿಯ ಅಭ್ಯರ್ಥಿಗಳ 3 ರೀತಿಯ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಮೂಲ ಪಟ್ಟಿ ತಿದ್ದುಪಡಿ ಮಾಡಿ ನಕಲು ಮಾಡಿರುವುದು ಸ್ಪಷ್ಟವಾಗಿದೆ.

ಚಿಕ್ಕೋಡಿಗೆ ಬಿಜೆಪಿಯಿಂದ ಅಣ್ಣಾಸಾಹೇಬ ಜೊಲ್ಲೆ? -ಈ ಪಟ್ಟಿ ನಕಲಿ!

ಒಂದು ಪಟ್ಟಿಯಲ್ಲಿ 39 ಅಭ್ಯರ್ಥಿಗಳ ಹೆಸರಿದೆ. ಇನ್ನೊಂದರಲ್ಲಿ 5 ಅಭ್ಯರ್ಥಿಗಳ ಹೆಸರಿದೆ. ಮತ್ತೊಂದರಲ್ಲಿ 4 ಅಭ್ಯರ್ಥಿಗಳ ಹೆಸರಿದೆ. ಒಂದರಲ್ಲಿ ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿಯ ಹೆಸರು ನಮೂದಿಸಲಾಗಿದೆ. ಚಿಕ್ಕೋಡಿಗೆ ಅಣ್ಣಾಸಾಹೇಬ ಜೊಲ್ಲೆ ಅಭ್ಯರ್ಥಿ ಎಂದು ಹಾಕಲಾಗಿದೆ.

ಆದರೆ ಈ ಪಟ್ಟಿ ತಿದ್ದುವಾಗ ಕ್ಷೇತ್ರದ ಸಂಖ್ಯೆಯನ್ನು ಹಾಗೇ ಉಳಿಸಲಾಗಿದೆ. ಚಿಕ್ಕೋಡಿ ಕ್ಷೇತ್ರದ ಸಂಖ್ಯೆ 1, ಆದರೆ ಈ ಪಟ್ಟಿಯಲ್ಲಿ 16 ಎಂದಿದೆ. ಅಲ್ಲದೆ, ಚಿಕ್ಕೋಡಿಯಲ್ಲಿ ಮತದಾನ 3ನೇ ಹಂತದಲ್ಲಿ, ಆ ಪಟ್ಟಿಯಲ್ಲಿ 2ನೇ ಹಂತ ಎಂದಿದೆ. 

ಚಿಕ್ಕೋಡಿ ಕ್ಷೇತ್ರದಲ್ಲಿ ರಮೇಶ ಕತ್ತಿ ಮತ್ತು ಅಣ್ಣಾ ಸಾಹೇಬ ಜೊಲ್ಲೆ ಮಧ್ಯೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ಮುಂದುವರಿದಿದ್ದು, ಅಂತಿಮ ಪಟ್ಟಿ ಬಿಡುಗಡೆಯಾಗಿಲ್ಲ. ಆದರೆ ಕೆಲವರು ಪಟ್ಟಿಯನ್ನು ನಕಲು ಮಾಡುವ ದುಷ್ಕೃತ್ಯದಲ್ಲಿ ತೊಡಗಿದ್ದಾರೆ. 

Related Articles

Back to top button