Election NewsPolitics
*ಡಿ.ಕೆ ಸುರೇಶ್ ವಿರುದ್ಧ ಕುಮಾರಸ್ವಾಮಿ ಆಡಿಯೋ ಬಾಂಬ್*

ಪ್ರಗತಿವಾಹಿನಿ ಸುದ್ದಿ: ಡಿ.ಕೆ ಸುರೇಶ್ ಅವರು ಸಿ.ಪಿ ಯೋಗೇಶ್ವರ್ ಅವರ ಬಗ್ಗೆ ಮಾತನಾಡಿರುವ ಆಡಿಯೋವನ್ನು ಕುಮಾರಸ್ವಾಮಿ ಅವರು ರಿಲೀಸ್ ಮಾಡಿದ್ದು ಚರ್ಚೆಗೆ ಕಾರಣವಾಗಿದೆ.
ಕುಮಾರಸ್ವಾಮಿ ಅವರು ಬಹಿರಂಗಪಡಿಸಿದ ಆಡಿಯೋದಲ್ಲಿ ಡಿ.ಕೆ ಸುರೇಶ್ ಅಪರಿಚಿತ ವ್ಯಕ್ತಿಯೊಂದಿಗೆ ಮಾತನಾಡಿರುವುದು ಕೇಳಿಸಿದೆ. ರಿಯಲ್ ಎಸ್ಟೇಟ್ನಲ್ಲಿ ಯಾರ್ ಯಾರಿಗೆ ಟೋಪಿ ಹಾಕಿದಾರೆ. ಬಿಡದಿಯಲ್ಲಿ ಹೋಗಿ ಕೇಳಿದ್ರೆ ಎಲ್ಲರೂ ಹೇಳ್ತಾರೆ. ಬಿಡದಿಯಲ್ಲಿ ಎಲ್ಲರಿಗೂ ಟೋಪಿ ಹಾಕಿಲ್ವ, ಮರೆತು ಹೋಗಿದ್ದಾನಾ ಸಿ.ಪಿ ಯೋಗೇಶ್ವರ್? ಈಗ ಯಾರಿಗೆ ಟೋಪಿ ಹಾಕಿಸಲು ಕರ್ಕೊಂಡು ಬಂದಿದ್ದಾರೆ ಕಾಂಗ್ರೆಸ್ನವರು? ಆದ್ದರಿಂದ ಇವೆಲ್ಲಾ ಬಿಟ್ಟುಬಿಡಿ. ಕೃಷ್ಣಭೈರೇಗೌಡರಿಗೂ ಹೇಳೀನಿ, ಚನ್ನಪಟ್ಟಣದಲ್ಲಿ ಇವತ್ತು ಕೆಲಸ ಮಾಡಿದ್ದೇನಲ್ಲಾ.. ಅದರ 10% ಕೆಲಸ ಮಾಡಿದ್ದೀರಾ? ಆ ಯೋಗ್ಯತೆ ನಿಮಗಿದೆಯಾ ಎಂದು ನಾನೂ ಕೇಳುತ್ತೇನೆ ಎಂದಿದ್ದಾರೆ.


