Latest

*ಮಕ್ಕಳೊಂದಿಗೆ ಬಾವಿಗೆ ಹಾರಿದ ತಂದೆ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಜೀವನದಲ್ಲಿ ಜಿಗುಪ್ಸೆಗೊಂಡು ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಂದೆಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿ ಆಳಂದ ಬಸ್ ಡಿಪೋ ಬಳಿ ನಡೆದಿದೆ.

ತಂದೆ ಹಾಗೂ ಇಬ್ಬರು ಪುಟ್ಟ ಮಕ್ಕಳು ಸಾವಿಗೆ ಶರಣಾಗಿದ್ದಾರೆ. ಸಿದ್ದು ಮಹಾಮಲ್ಲಪ್ಪ (35) ಹಾಗೂ ಮಕ್ಕಳಾದ ಶ್ರೇಯಾ (11), ಮನೀಶ್ (12) ಮೃತರು.

ಆಳಂದ ನಗರದ ಶರಣನಗರ ನಿವಾಸಿಗಳಾಗಿದ್ದ ತಂದೆ-ಮಕ್ಕಳು ಇಂದು ಏಕಾಏಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಮಕ್ಕಳಿಬ್ಬರ ಮೃತದೇಹವನ್ನು ಬಾವಿಯಿಂದ ಮೇಲಕೆತ್ತಿದ್ದಾರೆ. ತಂದೆ ಸಿದ್ದು ಮಹಾಮಲ್ಲಪ್ಪನ ಶವಕ್ಕಾಗಿ ಶೋಧ ನಡೆಸಲಾಗುತ್ತಿದೆ.

*ಸಿಎಂ ಮೂಗಿನ ನೇರಕ್ಕೆ ಭ್ರಷ್ಟಾಚಾರ ನಡೆಯುತ್ತಿದೆ; ಆತ ಯಾರಿಗೆ ಹಣ ಕೊಡಲು ತಂದಿದ್ದ?; ಸಿದ್ದರಾಮಯ್ಯ ಪ್ರಶ್ನೆ*

https://pragati.taskdun.com/vidhanasoudha10-5-lakh-foundsiddaramaiah-reaction/

Related Articles

Back to top button