Politics

*ಹೊಂದಾಣಿಕೆ ರಾಜಕಾರಣ ಮಾಡಲು ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿಲ್ಲ: ವಿಜಯೇಂದ್ರಗೆ ಹುಷಾರ್ ಎಂದ ಅರವಿಂದ ಲಿಂಬಾವಳಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯದ ಬಡಿದಾಟ ತಾರಕಕ್ಕೇರಿದೆ. ಶಾಸಕ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸುವ ನಿಟ್ಟಿನಲ್ಲಿ ಸಭೆ ಸೇರಿದ್ದ ಬಿಜೆಪಿ ನಾಯಕರ ವಿರುದ್ಧ ಮಾಜಿ ಶಾಸಕ ಅರವಿಂದ ಲಿಂಬಾವಳಿ ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ವಕ್ಫ್ ವಿರುದ್ಧ ನಡೆದ ಹೋರಾಟ ಕಾರ್ಯಕ್ರಮದಲ್ಲಿ ಮಾತನಾಡಿದ ಅರವಿಂದ ಲಿಂಬಾವಳಿ, ನಾವು ಹೋರಾಟ ಮಾಡುತ್ತಿರುವುದು ರೈತರ ಪರವಾಗಿ, ಜನರ ಪರವಾಗಿ, ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಅಲ್ಲ, ಜನ ಇದನ್ನೆಲ್ಲವನ್ನೂ ನೋಡುತ್ತಿದ್ದಾರೆ. ನಾವು ರೈತರ ಪರ ಹೋರಾಟಕ್ಕೆ ನಿಂತರೆ, ನೀವು ನಮ್ಮನ್ನು ಯತ್ನಾಳ್ ಬಣ ಎಂದು ಕರೆದು ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾತುಗಳನ್ನಾಡುತ್ತಿದ್ದೀರಿ. ಇಂತಹ ಭಿನ್ನಮತದ ರಾಜಕೀಯ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ನಿಮ್ಮ ಹೊಂದಾಣಿಕೆ ರಾಜಕಾರಣದಿಂದಾಗಿಯೇ ಇಂದು ಬಿಜೆಪಿಗೆ ಈ ಸ್ಥಿತಿ ಬಂದಿದೆ. ಸಿಎಂ, ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿ ಎಂದು ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿಲ್ಲ. ಹುಷಾರ್! ಎಂದು ಗುಡುಗಿದರು.

ಯತ್ನಾಳ್ ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ನಮ್ಮ ವಿರುದ್ಧ ಮಾತನಾಡುತ್ತಿದ್ದೀರಿ, ನಾವು ಹಾದಿ ಬೀದಿಯಲ್ಲಿ ಮಾತನಾಡುತ್ತಿಲ್ಲ, ನೀವಿಂದು ಬೀದಿಯಲ್ಲಿ ಮಾತನಾಡುತ್ತಿದ್ದೀರಿ. ಬಿಜೆಪಿಯನ್ನು ಜನ ವಿಪಕ್ಷ ಸ್ಥಾನದಲ್ಲಿಟ್ಟಿದ್ದಾರೆ. ನೀವು ವಿಪಕ್ಷದಲ್ಲಿದ್ದೀರಿ ಜವಾಬ್ದಾರಿಯಿಂದ ಒಗ್ಗಟ್ಟಿನ ಮತನಾಡುವುದನ್ನು ಬಿಟ್ಟು ರೀತಿ ಹೇಳಿಕೆ ಕೂಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Home add -Advt

Related Articles

Back to top button