Belagavi NewsBelgaum NewsKannada NewsKarnataka News

*ಪತ್ನಿಯನ್ನು ಕೊಂದು ಆಕ್ಸಿಡೆಂಟ್ ಕಥೆ ಕಟ್ಟಿದ ಲಾಯರ್*

ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿ ಮದುವೆಯಾಗಿದ್ದ ಗಂಡನೊಬ್ಬ ಪತ್ನಿಯನ್ನು ನಡು ರಸ್ತೆಯಲ್ಲಿ ಕೊಂದು ಅಕ್ಸಿಡೆಂಟ್ ನಾಟಕವಾಡಿದ ಘಟನೆ ಬೆಳಕಿಗೆ ಬಂದಿದೆ. 

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ್ ಬುದ್ರುಕ್ ಗ್ರಾಮದ ವಕೀಲ ಪ್ರದೀಪ ಕಿರಣಗಿ ಪತ್ನಿಯನ್ನು ಕೊಂದ ಆರೋಪಿ. ಚೈತಾಲಿ ಕಿರಣಗಿ ಕೊಲೆಯಾದ ಪತ್ನಿ. 

ಸೆ.7ರಂದು ಕಾಗವಾಡ ಸಿರಗುಪ್ಪಿ ಗ್ರಾಮಕ್ಕೆ ಆಸ್ಪತ್ರೆಗೆ ಹೋಗಬೇಕೆಂದು ಹೇಳಿ ಹೆಂಡತಿಯನ್ನು ಉಗಾರ್-ಶಿರಗುಪ್ಪಿ ರಸ್ತೆ ಮಧ್ಯೆಬಿಟ್ಟು ಗಂಡ ಪ್ರದೀಪ ಕಿರಣಗಿ ಹೋಗಿದ್ದ. ಈ ವೇಳೆ ವೇಗವಾಗಿ ಬಂದ ಕಾರು ಅವಳಿಗೆ ಡಿಕ್ಕಿ ಹೊಡೆದಿದೆ. ತಲೆಗೆ ಗಂಭೀರವಾಗಿ ಗಾಯವಾಗಿದೆ. ಚೈತಾಲಿಯನ್ನು ತಕ್ಷಣ ಮಿರಜ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು  ಕಿರಾತಕ ಗಂಡ ಕತೆ ಕಟ್ಟಿದ

ಆದರೆ ಆತನ ಮಾವ ಇದು ಪೂರ್ವ ನಿಯೋಜಿತ ಕೊಲೆ ಎಂದು ಕಾಗವಾಡ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ತನಿಖೆ ಪ್ರಾರರಂಭಿಸಿದ ಜಿಲ್ಲಾ ಪೊಲೀಸ್ ಕಾರು ಚಾಲಕ ಹಾಗೂ ಮೃತಳ ಗಂಡ ಪ್ರದೀಪ ಕಿರಣಗಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪೊಲೀಸ್ ತನಿಖೆ ವೇಳೆ ಇದು ಅಪಘಾತವಲ್ಲ ಕೊಲೆ ಎಂದು ತಿಳಿದುಬಂದಿದೆ. ಗಂಡ ಕಾರಿನಲ್ಲಿ ಮಡದಿಯನ್ನ ಕರೆದುಕೊಂಡು ಬಂದು ರಾಡ್ ನಿಂದ ಹೊಡೆದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾನೆ ಎಂದು ಬಹಿರಂಗವಾಗಿದೆ. ಈಗ ಪ್ರದೀಪ ಹಾಗೂ ರಾಜನ್ ಮತ್ತು ಮಹಾರಾಷ್ಟ್ರ ಮೂಲದ ಕಾರು ಚಾಲಕ  ಸದ್ದಾಮ ಎಂಬ ಮೂವರು ಪೊಲೀಸ್ ರ ಅತಿಥಿಯಾಗಿದ್ದು ಮತ್ತಿಬ್ಬರ ಮೇಲೆ ಮೇಲೆ ಸಂಶಯ ವ್ಯಕ್ತಪಡಿಸಲಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button