Latest

ದೇವರು ಯಾಕಿಂತ ಅನ್ಯಾಯ ಮಾಡಿದ…?; ಪುನೀತ್ ಅಂತಿಮ ದರ್ಶನ ಪಡೆದು ಗದ್ಗದಿತರಾದ ನಟ ನಂದಮೂರು ಬಾಲಕೃಷ್ಣ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೃದಯಾಘಾತದಿಂದ ನಿಧನರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಗದ್ಗದಿತರಾಗಿ ಕಣ್ಣೀರಿಟ್ಟಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಇರಿಸಲಾಗಿರುವ ಪುನೀತ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ನಟ ಬಾಲಕೃಷ್ಣ, ಕೆಲಕಾಲ ಕಣ್ಣೀರಾದರು. ಬಳಿಕ ನಟ ಶಿವರಾಜ್ ಕುಮಾರ್ ಹಾಗೂ ಪುನೀತ್ ಪತ್ನಿ ಅಶ್ವಿನಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

Home add -Advt

ಬಳಿಕ ಮಾತನಾಡಿದ ಬಾಲಕೃಷ್ಣ, ಪುನೀತ್ ನಿಧನದಿಂದ ಆಘಾತವಾಗಿದೆ. ನನ್ನ ಸಹೋದರ, ಸ್ನೇಹಿತ ಇಲ್ಲವೆಂದು ನೋವಾಗುತ್ತಿದೆ. ಒಂದೇ ತಾಯಿ ಮಕ್ಕಳಲ್ಲದಿದ್ದರೂ ಸೋದರರಂತಿದ್ದೆವು. ದೇವರು ಏಕೆ ಇಂತಹ ಅನ್ಯಾಯ ಮಾಡಿದ ಅನುಸುತ್ತಿದೆ. ಪುನೀತ್ ಕಲಾವಿದನಾಗಿ ಅಭಿಮಾನಿಗಳನ್ನು ರಂಜಿಸಿದ್ದರು. ನಟನೆ ಜತೆಗೆ ಪುನೀತ್ ಸಮಾಜಸೇವೆಯನ್ನೂ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಕಣ್ಣು ಕೂಡ ದಾನ ಮಾಡಿದ್ದಾರೆ. ನಾನು ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಬರುತ್ತಿದ್ದರು. ಲೇಪಾಕ್ಷಿಗೆ ಹಲವು ಬಾರಿ ಶಿವಣ್ಣ, ಪುನೀತ್ ಬಂದಿದ್ದರು. ಚಿಕ್ಕವಯಸ್ಸಿನಲ್ಲಿಯೇ ಪುನೀತ್ ನಮ್ಮನ್ನು ಅಗಲಿರುವುದು ದು:ಖ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪುನೀತ್ ಅಂತಿಮ ವಿಧಿವಿಧಾನ ನೆರವೇರಿಸಲಿರುವ ವಿನಯ್ ರಾಜ್ ಕುಮಾರ್

Related Articles

Back to top button