Belagavi NewsBelgaum NewsKannada NewsKarnataka NewsLatest

*ಜೊಲ್ಲೆ ತೆಕ್ಕೆಗೆ ಹುಕ್ಕೇರಿ ವಿದ್ಯುತ್ ಸಂಘ*

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ:

ಹುಕ್ಕೇರಿ ತಾಲ್ಲೂಕಿನ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಕತ್ತಿ ಕುಟುಂಬದ ಕೈ ತಪ್ಪಿ ಜೊಲ್ಲೆ ತೆಕ್ಕೆಗೆ ಬಿದ್ದಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆ ರಮೇಶ್ ಕತ್ತಿ ಜೊಲ್ಲೆ ವಿರುದ್ಧ ಕೆಲಸ ಮಾಡಿದ್ದಾರೆ ಎನ್ನುವ ಕಾರಣದಿಂದ ಜೊಲ್ಲೆ ತೀವ್ರ ಆಕ್ರೋಶಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ರಮೇಶ ಕತ್ತಿಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಲಾಗಿದೆ.

ಇದೀಗ ಬಹಳ ವರ್ಷದಿಂದ ಕತ್ತಿ ಕುಟುಂಬದ ಹಿಡಿತದಲ್ಲಿದ್ದ ಹುಕ್ಕೇರಿ ವಿದ್ಯುತ್ ಸಂಘವೂ ಜೊಲ್ಲೆ ತೆಕ್ಕೆಗೆ ಬಿದ್ದಂತಾಗಿದೆ.

ವಿದ್ಯುತ್ ಸಂಘದಲ್ಲಿ ಅವಿಶ್ವಾಸ ಮಂಡನೆಯಾದ ಹಿನ್ನಲೆಯಲ್ಲಿ 10 ಜನ ನಿರ್ದೇಶಕ ಮಂಡಳಿ ಸದಸ್ಯರು ಶನಿವಾರ ಜೊಲ್ಲೆಯವರ ಯಕ್ಸಂಬಾ ನಿವಾಸಕ್ಕೆ ತೆರಳಿ ಜೊಲ್ಲೆ ದಂಪತಿಯನ್ನು ಸತ್ಕರಿಸಿ,ಧನ್ಯವಾದ ತಿಳಿಸಿದರು.

ಇದೇ ವೇಳೆ ಜೊಲ್ಲೆ ಪರಿವಾರದ ವತಿಯಿಂದ ಅವರಿಗೆ ಅಭಿನಂದನೆ ಸಲ್ಲಿಸಿ, ತಮ್ಮ ಅವಧಿಯಲ್ಲಿ ವಿದ್ಯುತ್ ಸಹಕಾರಿ ಸಂಘ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಕೋರಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button