Latest

*ಯುವತಿಯ ಮನೆ ಮುಂದೆಯೇ ನೇಣಿಗೆ ಶರಣಾದ ಯುವಕ*

ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿದ ಹುಡುಗಿಯನ್ನು ಮದುವೆ ಮಾಡಿಕೊಡಲು ಆಕೆಯ ಮನೆಯವರು ನಿರಾಕರಿಸಿದರು ಎಂಬ ಕಾರಣಕ್ಕೆ ಮನನೊಂದ ಯುವಕ, ಯುವತಿಯ ಮನೆ ಮುಂದೆಯೇ ನೇಣಿಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಪಕ್ಕದ ಮನೆಯ ಯುವತಿಯನ್ನೇ ಮಂಜುನಾಥ್ ಪ್ರೀತಿಸಿದ್ದ. ಯುವತಿ ಕೂಡ ಮಂಜುನಾಥ್ ನನ್ನು ಮದುವೆಯಾಗಲು ಇಷ್ಟವಿತ್ತು. ಮಂಜುನಾಥ್ ಟಿವಿ ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದೆ. ಯುವತಿಯನ್ನು ವಿವಾಹವಾಗುವುದಾಗಿ ತನ್ನ ಮನೆಯಲ್ಲಿ ಕೇಳಿದ್ದ. ಮನೆಯಲ್ಲಿ ಒಪ್ಪಿದ್ದರು. ಮದುವೆ ಮಾಡಿಕೊಡುವಂತೆ ಯುವತಿ ಮನೆಯಲ್ಲಿ ಕೇಳಿದ್ದ. ಆದರೆ ಯುವತಿ ಮನೆಯವರು ಈಗಲೇ ಮದುವೆ ಮಾಡಲ್ಲ ಎಂದಿದ್ದಾರೆ.

Home add -Advt

ಇದೇ ವಿಚಾರಕ್ಕೆ ಮನನೊಂದ ಮಂಜುನಾಥ್ ಬೆಳಗಾಗುವಷ್ಟರಲ್ಲಿ ಯುವತಿಯ ಮನೆಯಂಗಣದಲ್ಲೇ ನೇನುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

Related Articles

Back to top button