Latest

ದೇಶದ ಇತಿಹಾಸದಲ್ಲೇ ಬಿಗ್ ಡ್ರಾಮಾ: ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್ ಸಿಪಿ ಸರಕಾರ

ಪ್ರಗತಿವಾಹಿನಿ ಸುದ್ದಿ, ಮುಂಬೈ -ರಾಷ್ಟ್ರದ ಇತಿಹಾಸದಲ್ಲೇ ಕಂಡರಿಯದ ಮಹಾ ಡ್ರಾಮಾವೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ರಾತ್ರೋರಾತ್ರಿ ನಡೆದ ರಾಜಕೀಯ ಬೆಳವಣಿಗೆ ನಂತರ ಇಂದು ಬೆಳಗ್ಗೆ 7 ಗಂಟೆಗೆ ಬಿಜೆಪಿ -ಎನ್ ಸಿಪಿ ಸರಕಾರ ಅಸ್ಥಿತ್ವಕ್ಕೆ ಬಂದಿದೆ. ಇದರಿಂದಾಗಿ ಸರಕಾರ ರಚಿಸುವ ಹುನ್ನಾರದಲ್ಲಿದ್ದ ಶಿವಸೇನೆಗೆ ಭಾರಿ ಮುಖಭಂಗವಾಗಿದೆ.

ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಪ್ರಕಟವಾಗಿ ಒಂದು ತಿಂಗಳಾಗಿದೆ. ಚುನವಣೆ ಪೂರ್ವ ಮೈತ್ರಿ ಇದ್ದರೂ ಬಿಜೆಪಿ ಜೊತೆ ಸರಕಾರ ರಚಿಸಲು ಶಿವಸೇನೆ ಹಲವಾರು ಷರತ್ತುಗಳನ್ನು ವಿಧಿಸಿತ್ತು. ಹಾಗಾಗಿ ಅದು ಅಸಾಧ್ಯ ಎಂದು ಬಿಜೆಪಿ ಕೈ ಚೆಲ್ಲಿತ್ತು.

ನಂತರದ ಬೆಳವಣಿಗೆಯಲ್ಲಿ ಶಿವಸೇನೆ ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆಗೆ ಸರಕಾರ ರಚಿಸಲು ಮುಂದಾಗಿತ್ತು. ಈ ಮಧ್ಯೆ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿತ್ತು. ನಿನ್ನೆ ರಾತ್ರಿಯವರೆಗೂ ಶಿವಸೇನೆ -ಎನ್ ಸಿಪಿ ಸರಕಾರ ಅಸ್ಥಿತ್ವಕ್ಕೆ ಬರಲಿದೆ ಎಂದೇ ಹಳಲಾಗಿತ್ತು.

ಆದರೆ ಹಠಾತ್ ಬೆಳವಣಿಯಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ದೇವೇಂದ್ರ ಫಡ್ನವೀಸ್ ಗೆ ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಿದರು.

ಇದು ದೇಶದ ಇತಿಹಾಸದಲ್ಲೇ ದೊಡ್ಡ ಡ್ರಾಮಾವೆನಿಸಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button