Kannada NewsKarnataka NewsLatest
ಹಬ್ಬದ ಸಂಭ್ರಮದಲ್ಲಿದ್ದ ಇಬ್ಬರು ಮಕ್ಕಳ ಬಲಿ ಪಡೆದ ಕೃಷಿ ಹೊಂಡ

ಪ್ರಗತಿವಾಹಿನಿ ಸುದ್ದಿ, ಅಥಣಿ: ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಇಬ್ಬರು ಮಕ್ಕಳನ್ನು ಕೃಷಿ ಹೊಂಡ ಬಲಿ ತೆಗೆದುಕೊಂಡಿದೆ.
ತಾಲೂಕಿನ ಸಪ್ತಸಾಗರದಲ್ಲಿ ಈ ದುರ್ಘಟನೆ ನಡೆದಿದೆ. ಶ್ರೀಧರ ಪಾರೀಸ್ ಹೊಸೂರು (15) ಹಾಗೂ ಹರ್ಷಿತಾ ಶೀತಲ್ ಚಿಪ್ಪಾಡಿ(8) ಮೃತಪಟ್ಟ ಮಕ್ಕಳು.
ಯುಗಾದಿ ಹಬ್ಬದ ನಿಮಿತ್ತ ದೇವರ ದರ್ಶನ ಮಾಡಿ ನೈವೇದ್ಯ ಸೇವೆ ನಂತರ ಪ್ರಸಾದ ಸೇವಿಸಿದ್ದರು. ಅನಂತರದಲ್ಲಿ ಪ್ಲೇಟ್ ತೊಳೆಯಲು ಕೃಷಿ ಹೊಂಡಕ್ಕೆ ಹೋಗಿದ್ದ ಹರ್ಷಿತಾ ಆಯ ತಪ್ಪಿ ನೀರಿಗೆ ಬಿದ್ದಳು. ಅವಳನ್ನು ರಕ್ಷಿಸಲು ಹೋಗಿದ್ದ ಶ್ರೀಧರ್ ಕೂಡ ಹೊಂಡದಲ್ಲಿ ಬಿದ್ದು ಮೇಲೇಳಲಾಗದೆ ಇಬ್ಬರೂ ಅಸುನೀಗಿದರು. ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಗಳು ಶೋಕತಪ್ತವಾಗಿವೆ.
ಅಥಣಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.




