ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿರುವ 2021-22ರ ಬಜೆಟ್ ನಲ್ಲಿ ತೈಲದರದಲ್ಲಿ ಮತ್ತೆ ಏರಿಕೆ ಮಾಡಲಾಗಿದೆ. ಕೃಷಿ ಮೂಲಸೌಕರ್ಯ ಸೆಸ್ ಮೂಲಕ ಏರಿಕೆ ಮಾಡಲಾಗಿದ್ದು, ರಸಗೊಬ್ಬರ, ಚಿನ್ನ, ಬೆಳ್ಳಿ, ಮದ್ಯ, ವಾಹನಗಳ ಬಿಡಿ ಭಾಗಗಳ ಬೆಲೆ ಏರಿಕೆ ಮಾಡಲಾಗಿದೆ.
ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಭಾರೀ ಏರಿಕೆ ಮಾಡಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ದರ 2.5ರೂನಂತೆ ಹೆಚ್ಚಳವಾಗಿದೆ. ಡೀಸೆಲ್ ದರದಲ್ಲಿ ಪ್ರತೀ ಲೀಟರ್ ಗೆ 4 ರೂನಂತೆ ಏರಿಕೆ ಮಾಡಲಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರ ಮದ್ಯಪ್ರಿಯರಿಗೆ ಶಾಕ್ ನೀಡಿದ್ದು, ಆಲ್ಕೋಹಾಲ್ ಮೇಲೆ ಶೇ.100ರಷ್ಟು ಸೆಸ್ ವಿಧಿಸಿದೆ. ಚಿನ್ನ ಬೆಳ್ಳಿ ಖರೀದಿದಾರರ ಜೇಬಿಗೂ ಕತ್ತರಿ ಹಾಕಲಾಗಿದೆ.
ಕಾಬೂಲ್ ಕಡಲೆಗೆ ಶೇ.30ರಷ್ಟು ಕೃಷಿ ಸೆಸ್, ಸೇಬಿನ ಮೇಲೆ ಶೇ 35ರಷ್ಟು ಸೆಸ್. ಬಟಾಣಿ ಮೇಲೆ ಶೇ.40 ರಷ್ಟು ಸೆಸ್ ವಿಧಿಸಲಾಗಿದೆ. ಯೂರಿಯಾ ಸೇರಿ ಕೆಲ ನಿರ್ದಿಷ್ಟ ರಸಗೊಬ್ಬರದ ಬೆಲೆಯೂ ಏರಿಕೆಯಾಗಿದ್ದು, ವಿದೇಶಗಳಿಂದ ಬರುವ ವಾಹನಗಳ ಬಿಡಿ ಭಾಗಗಳ ಬೆಲೆಯನ್ನೂ ಹೆಚ್ಚಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ