LatestUncategorized

*ಉತ್ತರ ಕನ್ನಡ ವಿಭಜನೆ ವಿಚಾರ; ಸಚಿವ ಶಿವರಾಮ್ ಹೆಬ್ಬಾರ್ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ; ಅಂಕೋಲಾ: ಉತ್ತರ ಕನ್ನಡ ಜಿಲ್ಲೆ ವಿಭಜನೆ ಬಗ್ಗೆ ನಾನು ಮಾತನಾಡಿಲ್ಲ. ಆದರೆ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದು ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ಅಂಕೋಲಾದಲ್ಲಿ ಮಾತನಾಡಿದ ಸಚಿವರು, ಶಿರಸಿ ಪ್ರತ್ಯೇಕ ಜಿಲ್ಲೆ ವಿಚಾರವಾಗಿ ಮಾತನಾಡಲು ನಾನು ಉಸ್ತುವಾರಿ ಸಚಿವನಲ್ಲ. ಆದರೆ ಜಿಲ್ಲೆಯ ಶಾಸಕನಾಗಿ ನಾನು ಮಾತನಾಡುವ ಅವಶ್ಯಕತೆಯಿದೆ. ಉತ್ತರ ಕನ್ನಡ ವಿಭಜನೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಶಾಸಕರ ಜೊತೆ ಚರ್ಚೆ ನಡೆಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಮತ ಮುಖ್ಯವಾಗುತ್ತದೆ ಎಂದರು.

Home add -Advt

ಶಿರಸಿ ಪ್ರತ್ಯೇಕ ಜಿಲ್ಲೆಯ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೊಂದಿಗೂ ಚರ್ಚೆ ನಡೆಸಲಾಗುವುದು. ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಬೇಕು ಎಂದು ಹೇಳಿದರು.

*ಗಡಿ ವಿವಾದ: ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಭೆ: ಸಿಎಂ ಬೊಮ್ಮಾಯಿ*

https://pragati.taskdun.com/karnataka-maharashtra-border-isshueamith-shahmeetingcm-basavaraj-bommai/

 

*ದೇವಾಲಯಗಳಲ್ಲಿ ಆರತಿ ರದ್ದಾಗಿಲ್ಲ ಆದರೆ…ಸ್ಪಷ್ಟನೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ*

https://pragati.taskdun.com/shashikala-jolleclarificationsalam-aratiname-change/

Related Articles

Back to top button