
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗುರುರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ಸಿಇಓ ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ವಾಸುದೇವ ಮಯ್ಯ ಆತ್ಮಹತ್ಯೆ ಘಟನೆ ಹೈ ಪ್ರೋಫೈಲ್ ಪ್ರಕರಣವಾಗಿದ್ದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತು. ಕೋ ಆಪರೇಟಿವ್ ಸೊಸೈಟಿ ಅವ್ಯವಹಾರ ಪ್ರಕರಣದ ತನಿಖೆ ನಡೆಯುತ್ತಿದ್ದ ವೇಳೆಯೇ ವಾಸುದೇವ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆ ಸಂದರ್ಭದಲ್ಲಿ ಕಾರಿನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ಅದರಲ್ಲಿ ಸೊಸೈಟಿಯಿಂದ ಸಾಲ ಪಡೆದವರು ಹಾಗೂ ಬ್ಯಾಂಕ್ ನ ಅಧಿಕಾರಿಗಳ ಹೆಸರು ಸಹ ಉಲ್ಲೇಖ ಮಾಡಿದ್ದಾರೆ. ಡೆತ್ ನೋಟ್ ನಲ್ಲಿ 11 ಜನರ ಬಗ್ಗೆ ಉಲ್ಲೇಖ ಮಾಡಿದ್ದರು. ಹೀಗಾಗಿ ವಾಸುದೇವ ಅವರ ಮಗಳು 11 ಜನರ ಮೇಲೆ ದೂರು ದಾಖಲು ಮಾಡಿದ್ದರು.
ಇದೀಗ ಡೆತ್ ನೋಟ್ ನಲ್ಲಿ ಇರುವ ಹೆಸರುಗಳು ಹಾಗೂ ಸಿಐಡಿ ತನಿಖೆ ವೇಳೆ ಪತ್ತೆಯಾದ ವ್ಯಕ್ತಿಗಳಿಗೆ ಸಾಮ್ಯತೆ ಇದ್ದು ಎರಡು ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ ವಹಿಸಲಾಗಿದೆ.