Latest

*ಬೆಳಗಾವಿಯಲ್ಲಿ ಕಾಂಗ್ರೆಸ್ 12 ಸೀಟು ಗೆಲ್ಲುವುದು ಖಚಿತ ಎಂದ ಎಂ.ಬಿ.ಪಾಟೀಲ್ ; ರಮೇಶ್ ಜಾರಕಿಹೊಳಿ ಬಗ್ಗೆ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಗಳ ಬಗ್ಗೆ, ಅವರ ಮಾತಿನ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡಲ್ಲ. ಅದಕ್ಕೆ ಉತ್ತರ ಕೊಡಬೇಕಾದದ್ದು ಅಧ್ಯಕ್ಷರು. ಅವರೇ ಉತ್ತರ ಕೊಡುತ್ತಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ಯಾರನ್ನೂ ಯಾರೂ ಮುಗಿಸಲು ಆಗಲ್ಲ. ಎಲ್ಲವನ್ನೂ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

Related Articles
Home add -Advt

ಇದೇ ವೇಳೆ ಬೆಳಗಾವಿಯಲ್ಲಿ ನಾವು 12 ಸ್ಥಾನ ಗೆಲ್ಲುವುದು ಖಚಿತ. ಮುಂಬೈ ಕರ್ನಾಟಕದಲ್ಲಿ ಹೆಚ್ಚಿನ ಸೀಟು ಗೆಲ್ಲುತ್ತೇವೆ. ಕಾಂಗ್ರೆಸ್ ಗೆ 130-140 ಸೀಟ್ ಗಿಂತ ಕಡಿಮೆ ಬರುವುದಿಲ್ಲ. ಬಿಜೆಪಿಯವರು 65-70 ಸೀಟು ದಾಟುವುದಿಲ್ಲ ಎಂದು ಹೇಳಿದರು.

ಪಂಚಮಸಾಲಿ ಸಮುದಾಯ ಮಾತ್ರವಲ್ಲ ಎಲ್ಲಾ ಸಮುದಾಯಕ್ಕೂ ನಾವು ಮಾನ್ಯತೆ ಕೊಡುತ್ತೇವೆ. ಸ್ಕ್ರೀನಿಂಗ್ ಕಮಿಟಿ, ಹಾಗೂ ಚುನಾವಣಾ ಸಮಿತಿ ಚರ್ಚೆ ಬಳಿಕ ಶೀಘ್ರವೇ ಪಟ್ಟಿ ಬಿಡುಗಡೆ ಮಾಡುತ್ತೇವೆ . ಯಾರು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.

*ಚಿನ್ನದಂಗಡಿ ಮಾಲೀಕರು, ಉದ್ಯಮಿಗಳಿಗೆ IT ಶಾಕ್; 25 ಕಡೆ ದಾಳಿ*

https://pragati.taskdun.com/it-raidbangalorejuweliry-shopowners/

Related Articles

Back to top button