Latest

*ಸಿಎಂ ಮೂಗಿನ ನೇರಕ್ಕೆ ಭ್ರಷ್ಟಾಚಾರ ನಡೆಯುತ್ತಿದೆ; ಆತ ಯಾರಿಗೆ ಹಣ ಕೊಡಲು ತಂದಿದ್ದ?; ಸಿದ್ದರಾಮಯ್ಯ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸೌಧದಲ್ಲಿ ಸಹಾಯಕ ಇಂಜಿನಿಯರ್ ಬಳಿ ಅನಧಿಕೃತವಾಗಿ 10.5 ಲಕ್ಷ ಹಣ ಪತ್ತೆಯಾಗಿದೆ ಎಂದರೆ ಇದರ ಅರ್ಥ ವಿಧಾನಸೌಧದಲ್ಲೇ ಲಂಚ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಅವರ ಮೂಗಿನ ನೇರಕ್ಕೆ ಭ್ರಷ್ಟಾಚಾರ ನಡೆಯುತ್ತಿದೆ. ಲೊಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ವಿಧಾನಸೌಧದಲ್ಲಿ ಯಾರಿಗೆ ಹಣ ಕೊಡಲು ತಂದಿದ್ದ? ಎಂದು ಕೇಳಿದ್ದಾರೆ.

Home add -Advt

PWD ಸಚಿವರಿಗೆ ಲಂಚ ಕೊಡಲು ತಂದಿರಬೇಕು. ಇಲ್ಲಾ ಮುಖ್ಯಮಂತ್ರಿಗಳಿಗೆ ಲಂಚ ಕೊಡಲು ಬಂದಿರಬೇಕು. ಈ ಬಗ್ಗೆ ಸೂಕ್ತ ತನಿಖೆ ನಡೆದು ಸತ್ಯಾಂಶ ಹೊರಬರಲಿ ಎಂದರು.

*ಹೆದ್ದಾರಿಯಲ್ಲಿಯೇ ಪಲ್ಟಿಯಾಗಿ ಬಿದ್ದ KSRTC ಬಸ್*

https://pragati.taskdun.com/ksrtc-busaccidentmandya/

Related Articles

Back to top button