Election NewsKannada NewsKarnataka NewsPolitics

ಈಶ್ವರಪ್ಪ ನಾಮಪತ್ರ ಸಲ್ಲಿಕೆ: ಕಾದು ನೋಡಿ ಎಂದ ವಿಜಯೇಂದ್ರ

ಪ್ರಗತಿವಾಹಿನಿ ಸುದ್ದಿ,: ಇನ್ನೂ ನಾಮಪತ್ರ ವಾಪಾಸ್ ಪಡೆಯಲು ಸಮಯ ಇದೆ.‌ ಹೊಸ ಚರ್ಚೆಗಳನ್ನು ಮಾಡಬೇಡಿ.‌  ಕಾದು ನೋಡಿ ಎಂದು ಈಶ್ವರಪ್ಪ ನಾಮಪತ್ರ ಸಲ್ಲಿಕೆ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.‌ 

ಬಳ್ಳಾರಿ-ವಿಜಯನಗರ ಲೋಕಸಭಾ ಕ್ಷೇತ್ರದ  ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಶ್ರೀರಾಮುಲು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ ಅವರು, ನಾವು 28 ಸ್ಥಾನಗಳನ್ನು ಗೆಲ್ಲಬೇಕು ಅನ್ನೋ ಗುರಿ ಇದೆ ಅಷ್ಟೆ. ಹೆಚ್ಚು ಸ್ಥಾನ ಗೆದ್ರೆ, ವಿಜಯೇಂದ್ರ ಸ್ಥಾನ ಗಟ್ಟಿಯಾಗುತ್ತದೆ ಎಂದು ತಿಳಿಸಿದರು.‌

Home add -Advt

ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಶ್ರೀರಾಮುಲು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ.‌ ನಾನು ಅವರ ಜತೆ ಇದ್ದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇವೆ. ಯಡಿಯೂರಪ್ಪ ಅವರು ಆದೇಶ ಮಾಡಿದ ಹಿನ್ನೆಲೆಯಲ್ಲಿ ನಾನು ಇಲ್ಲಿಗೆ ಬಂದಿದ್ದೇನೆ.‌ ಬಿಜೆಪಿ- ಜೆಡಿಎಸ್ ಒಟ್ಟಾಗಿದೆ, ಬಹಳ ಅಂತರದಲ್ಲಿ ಶ್ರೀರಾಮುಲು ಗೆಲ್ಲುತ್ತಾರೆ.‌ ರಾಮುಲು ಪರವಾಗಿ ಯಡಿಯೂರಪ್ಪ ಕೂಡ ಪ್ರಚಾರಕ್ಕೆ ಬರ್ತಾರೆ ಎಂದು ವಿಜಯೇಂದ್ರ ಅವರು ತಿಳಿಸಿದ್ದಾರೆ.

Related Articles

Back to top button