Latest

ಇಂದು 914 ಜನರಿಗೆ ತಲೆ ದಂಡ; 91,400 ರೂ. ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮೇ 13ರಿಂದ ಬೆಳಗಾವಿಯಲ್ಲಿ ಕಟ್ಟುನಿಟ್ಟಾಗಿ ಹೆಲ್ಮೆಟ್ ಧರಿಸದವರ ಮೇಲೆ ಕಾರ್ಯಚರಣೆ ನಡೆಸುತ್ತಿರುವ ಪೊಲೀಸರು ನಿತ್ಯವೂ 600 -1000 ಜನರ ಮೇಲೆ ಪ್ರಕರಣ ದಾಖಲಿಸಿ, ತಲಾ 100 ರೂ.ಗಳಂತೆ ದಂಡ ವಸೂಲಿ ಮಾಡುತ್ತಿದ್ದಾರೆ.

ಭಾನುವಾರ ಕೂಡ ಕಾರ್ಯಚರಣೆ ಮುಂದುವರಿದಿದ್ದು, ಇಂದು 914 ಜನರ ಮೇಲೆ ಪ್ರಕರಣ ದಾಖಲಿಸಿ, 91,400 ರೂ. ವಸೂಲಿ ಮಾಡಲಾಗಿದೆ. 

ದಾಳಿ ನಿಂರತರವಾಗಿ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದು, ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಡುವಾಗ ತಲೆ ಮತ್ತು ಕಿಸೆಯ ಸುರಕ್ಷತೆಯ ಕಡೆ ಗಮನಿಸಿದರೆ ಒಳಿತು. 

Related Articles

Back to top button