Latest

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮೈಲಿಗಲ್ಲು -ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಮಿಶನ್ ಶಕ್ತಿ ಹೆಸರಲ್ಲಿ ಸ್ಯಾಟಲೈಟ್ ಕ್ಷೇತ್ರದಲ್ಲಿ ಭಾರತ ಮಹತ್ವದ ಸಾಧನೆ ಮಾಡಿದ್ದು, ಕೇವಲ 3 ನಿಮಿಷದಲ್ಲಿ ಸೆಟಲೈಟ್ ಹೊಡೆದುರುಳಿಸಬಹುದಾದ  ಸಾಧನೆ ಮಾಡುವ ಮೂಲಕ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ. 

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಎ ಸ್ಯಾಟ್ ಮಿಸೈಲ್ ಅಭಿವೃದ್ಧಿ ಮೂಲಕ ಅಮೇರಿಕಾ, ರಷ್ಯಾ ಮತ್ತು ಚೀನಾದ ಸಾಲಿನಲ್ಲಿ ನಾವು ನಿಂತಿದ್ದೇವೆ ಎಂದರು. 

ಬಹಳ ವರ್ಷದ ನಮ್ಮ ಕನಸು ನನಸಾಗಿದೆ. ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿ ಮತ್ತು ರಕ್ಷಣೆಯ ದೃಷ್ಟಿಯಲ್ಲಿ ಬಹಳ ಮತ್ವದ ಸಾಧನೆ ಮಾಡಿದ್ದೇವೆ. ಭಾರತದ ಸುರಕ್ಷತೆಯ ದೃಷ್ಟಿಯಿಂದ ‘ಮಿಶನ್ ಶಕ್ತಿ’ ಕಾರ್ಯಾಚರಣೆ ಅತ್ಯಗತ್ಯ. ಗುರಿಯನ್ನು ತಲುಪುವುದಕ್ಕೆ ಕಷ್ಟವಾದರೂ, ಕೇವಲ ಮೂರು ನಿಮಿಷಗಳಲ್ಲಿ ವೈರಿ ರಾಷ್ಟ್ರದ ಸೆಟಲೈಟ್ ಹೊಡೆದುರುಳಿಸಬಹುದು. ಆದರೆ ನಾವಾಗಿ ಯಾರ ತಂಟೆಗೂ ಹೋಗುವುದಿಲ್ಲ ಎಂದು ಮೋದಿ ಹೇಳಿದರು.

Home add -Advt

 

Related Articles

Back to top button