Latest

ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ

ತಾಲೂಕಿನ ನಿಲಜಿ ಗ್ರಾಮದ ಬಾಗಲಕೋಟ ರಸ್ತೆಯಿಂದ ಅಲೋಖಿಕ ಜ್ಞಾನ ಮಂದಿರದವರೆಗಿನ ರಸ್ತೆ ದುರಸ್ತಿಗಾಗಿ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತಮ್ಮ ಶಾಸಕರ ನಿಧಿಯಿಂದ 5 ಲಕ್ಷ ರೂ. ನೀಡಿದ್ದಾರೆ.

ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಕವಟಗಿಮಠ ಅವರಲ್ಲಿ ಅನುದಾನಕ್ಕೆ ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಕವಟಗಿಮಠ, ತಮ್ಮ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಈ ಕಾಮಗಾರಿಗೆ ರೂ. ೫ ಲಕ್ಷಗಳ ಅನುದಾನವನ್ನು ಮಂಜೂರು ಮಾಡಿಸಿದ್ದಾರೆ.

ಕಾಮಗಾರಿಗೆ ಚಾಲನೆ ನೀಡಿದ ಅಲೋಖಿಕ ಜ್ಞಾನ ಮಂದಿರದ ಸಂಸ್ಥಾಪಕ ಶಿವಾನಂದ ಗುರುಜಿ ಹಾಗೂ ನಿಲಜಿ ಗ್ರಾಮ ಪಂಚಾಯತ ಸದಸ್ಯ ರವಿ ಕೋಟಬಾಗಿ, ಭರಮಾ ಗೋಮನ್ನಾಚೆ, ವಸಂತ ಪಾಟೀಲ, ಉಮೇಶ ಪುರಿ, ಬಾಹು ಪಾಟೀಲ, ಕಿರಣ ಪಾಟೀಲ, ಸಂದೀಪ ನಿಲಜಕರ, ವೀರಭದ್ರ ಪೂಜಾರಿ ಹಾಗೂ ಗ್ರಾಮಸ್ಥರು ಅನುದಾನ ನೀಡಿದ್ದಕ್ಕಾಗಿ ಕವಟಗಿಮಠ ಅವರಿಗೆ ಕೃತಜ್ಞತೆ ಸಲ್ಲಿಸಿದರು.

Related Articles

Back to top button