Latest

ರವಿಶಂಕರ ವಿದ್ಯಾಮಂದಿರ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ನಗರದ ಬೆನಕನಹಳ್ಳಿಯ ಶ್ರೀ ರವಿಶಂಕರ ವಿದ್ಯಾಮಂದಿರ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಜಯಪುರ ಸೈನಿಕ ಶಾಲೆ ನಿವೃತ್ತ ಪ್ರಾಚಾರ್ಯ ಡಿ. ವಿಜಯಕುಮಾರ, ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಶಿಕ್ಷಕರಿಗಿಂತ ಪಾಲಕರ ಪಾತ್ರ ಮಹತ್ವದ್ದಾಗಿದೆ. ಪಾಲಕರಾದವರು ತಮ್ಮೆಲ್ಲ ಕೆಲಸಗಳ ಮಧ್ಯೆಯೂ ಮಕ್ಕಳ ಕುರಿತು ಕಾಳಜಿ ವಹಿಸುವುದು ಅತ್ಯಗತ್ಯ ಎಂದು ಹೇಳಿದರು
ನಿವೃತ್ತ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ ಮಾತನಾಡಿ, ದೇಶ ಕಾಯುವ ಕೆಲಸ ಕೇವಲ ಗಡಿಯಲ್ಲಿರುವ ಸೈನಿಕರದ್ದು ಎಂಬ ಭಾವನೆ ತೊಲಗಬೇಕಿದೆ. ದೇಶದ ಪ್ರತಿಯೊಬ್ಬ ನಾಗರಿಕನೂ ದೇಶ ಕಾಯುವ ಸಿಪಾಯಿಯಾಗಬೇಕು. ದೇಶದ ಕುರಿತು ಅಭಿಮಾನ, ಭಕ್ತಿಯನ್ನು ಮನಸ್ಸಿನಲ್ಲಿ ಬಿತ್ತುವ ಕಾರ‍್ಯ ಚಿಕ್ಕಮಕ್ಕಳಿದ್ದಾಗಿನಿಂದಲೇ ಆಗಬೇಕು. ಇದು ಶಿಕ್ಷಕರು ಮತ್ತು ಪಾಲಕರಿಂದ ಮಾತ್ರ ಸಾಧ್ಯ. ಧೈರ್ಯದಿಂದ ಹೋರಾಡಿ ಮರಳಿ ಬಂದಿರುವ ಅಭಿನಂದನ್ ಎಲ್ಲರಿಗೂ ಮಾದರಿಯಾಗಲಿ ಎಂದರು.

ವಿದ್ಯಾರ್ಥಿಗಳು ನೃತ್ಯ, ಹಾಡು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಸಂಸ್ಥೆಯ ಚೇರಮನ್ ಸಿದ್ಧಾರೂಢ ಸಂಗೊಳ್ಳಿ, ಪ್ರಾಚಾರ್ಯೆ ಉಜ್ವಲಾ ದೇಶಪಾಂಡೆ, ಸಂಯೋಜಕಿ ಸುಮಂಗಲಾ ಪಾಟೀಲ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

Home add -Advt

Related Articles

Back to top button