Latest

ಗಾಯತ್ರಿ ಸಭಾ ಭವನಕ್ಕೆ ಪೇಜಾವರ ಶ್ರೀಗಳವರ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ 

ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಅನಗೋಳ ಉಪನಗರದಲ್ಲಿ ಬೆಳಗಾವಿ ಜಿಲ್ಲಾ ಅಖಿಲ ಬ್ರಾಹ್ಮಣ ಸಮಾಜದ ವತಿಯಿಂದ ನಿರ್ಮಿಸುತ್ತಿರುವ ಗಾಯತ್ರಿ ಸಭಾ ಭವನಕ್ಕೆ ಭೇಟಿ ನೀಡಿದ್ದರು.

Home add -Advt

ಯೋಜನೆ ಕುರಿತು ಸಂತಸ ವ್ಯಕ್ತ ಪಡಿಸಿದ ಶ್ರೀಗಳು, ಶ್ರೀಮಠದ ವತಿಯಿಂದ ಹತ್ತು ಸಾವಿರ ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ಸಲ್ಲಸಿ ಕಟ್ಟಡವು ಶೀಘ್ರವಾಗಿ ಪೂರ್ಣಗೊಳ್ಳಲೆಂದು ಆಶಿರ್ವದಿಸಿದರು.
ಸಮಾಜದ ಅಧ್ಯಕ್ಷ ಎಸ್. ಎಮ್. ಕುಲಕರ್ಣಿ  ಹಾಗೂ ಕಾರ‍್ಯದರ್ಶಿ ಆರ್. ಎಸ್ ಮುತಾಲಿಕ ಅವರು ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಬ್ರಾಹ್ಮಣ ಸಮಾಜದ ಖಜಾಂಚಿ ಅರವಿಂದ ಹುನಗುಂದ, ಶಿರೀಷ ಕಾನೆಟಕರ್, ಗೋವಿಂದ ಫಡಕೆ, ವಿನಯ ಕುಲಕರ್ಣಿ, ಪ್ರಿಯಾ ಪುರಾಣಿಕ ಹಾಗೂ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಹಾಗೂ ನಿಮ್ಮ ಪರಿಚಿತರಿಗೆ ಶೇರ್ ಮಾಡಿ)

Related Articles

Back to top button