Latest

*ವೈದ್ಯರ ಎಡವಟ್ಟು*: *ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ ಒಂದೂವರೆ ವರ್ಷದ ಮಗು ಕೋಮಾಗೆ*

ಕಿವಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ ಒಂದುವರೆ ವರ್ಷದ ಮಗು ಚಿಕಿತ್ಸೆ ಬಳಿಕ ಕೋಮಾಗೆ ಜಾರಿರುವ ಘಟನೆ ನಡೆದಿದೆ. ಕುಟುಂಬದವರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಅರೆ.

ಒಂದೂವರೆ ವರ್ಷದ ಮಗುವಿನ ಕಿವಿಗೆ ಗಾಯವಾಗಿತ್ತು. ಶಸ್ತ್ರಚಿಕಿತ್ಸೆ ವೇಳೆ ಗಂಭೀರ ಎಡವಟ್ಟಾಗಿದ್ದು, ಮಗು ಕೋಮಾಅಗೆ ಜಾಅರಿದೆ. ಸದ್ಯ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಜ್ಞರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನ ನಾಗರಭಾವಿಯ ಕ್ಲೌಡ್‌ ನೈನ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.

ಶಯನ್​​ ಕೋಮಾಗೆ ಜಾಅರಿದ ಕಂದಮ್ಮ. ಕಿವಿಗೆ ಗಾಯವಾಗಿದ್ದ ಕಾರಣ ಮಗುವನ್ನು ಶಸ್ತ್ರಚಿಕಿತ್ಸೆಗಾಗಿ ನಾಗರಭಾವಿಯ ಕ್ಲೌಡ್‌ ನೈನ್ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಸೆಪ್ಟೆಂಬರ್ 26ರಂದು ಕಿವಿಯ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಶಸ್ತ್ರಚಿಕಿತ್ಸೆ ವೇಳೆ ಅರಿವಳಿಕೆ ನೀಡಿದ ಬಳಿಕ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ.

ಲರಿಂಗೋಸ್ಪಸಂ ಉಂಟಾಗಿ ಮಗುವಿನ ಆಮ್ಲಜನಕ ಮಟ್ಟ ಕುಸಿತವಾಗಿದೆ. ಬಳಿಕ ಮಗುವಿಗೆ ಸುಮಾರು 7 ನಿಮಿಷಗಳ ಕಾಲ ಹೃದಯ ಸ್ತಂಭನ ಉಂಟಾಗಿದ್ದು, ಸಿಪಿಆರ್ ಮೂಲಕ ಪುನಶ್ಚೇತನ ನೀಡಲಾಗಿದೆ ಎಂದು ತಜ್ಞರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಮಗುವಿಗೆ ವೆಂಟಿಲೇಟರ್ ಹಾಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜಯನಗರದಲ್ಲಿರವ ಕ್ಲೌಡ್‌ ನೈನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮಗುವಿನ​ ತಾಯಿ ಮೋನಿಕಾ ಪ್ರತಿಕ್ರಿಯಿಸಿದ್ದು, ‘ಮಗುವಿಗೆ ಚಿಕಿತ್ಸೆ ನಡೆದು 3 ತಿಂಗಳಾದರೂ ಚೇತರಿಕೆ ಕಂಡಿಲ್ಲ. ಈಗಲೂ ಕೂಡ ಮಗು ತುರ್ತು ನಿಗಾ ಘಟಕದಲ್ಲೇ ಇದೆ. ಮಗು ಮತ್ತೆ ಹುಷಾರಾಗಿ ನಮಗೆ ಸಿಗುತ್ತೆ ಅನ್ನೋ ವಿಶ್ವಾಸ ಕ್ಷೀಣಿಸುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.

child,fall into coma,ear treatment,cloudnine hospital

Related Articles

Back to top button