ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಕೋವಿಡ್ ನಂತರದ ದಿನಗಳಲ್ಲಿ ಭಾರತ ಆರ್ಥಿಕವಾಗಿ ಪುಟಿದೆದ್ದಿದ್ದು, ಕರ್ನಾಟಕವೂ ಅದೇ ಹಾದಿಯಲ್ಲಿ ಸಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದೇವೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಭಾಷಣ ಆರಂಭಿಸಿದ ಸಿಎಂ ಬೊಮ್ಮಾಯಿ, ಈ ಬಜೆಟ್ ಮುಂದಿನ 25 ವರ್ಷಗಳ ದೂರದೃಷ್ಟಿ ಹೊಂದಿದೆ ಎಂದರು. ಕುವೆಂಪು ಅವರು ನುಡಿದಂತೆ ಹೋಗುತಿದೆ ಹಳೆ ಕಾಲ ಹೊಸ ಕಾಲ ಬರುತಲಿದೆ… ಬರುತಲಿದೆ ಹೊಸ ದೃಷ್ಟಿ, ಹಳೆಯ ಬಾಳು ಹೋಗುತಲಿದೆ, ಹೊಸ ಬಾಳು ಬರುತಲಿದೆ… ಎಂಬಂತೆ ಹೊಸ ದೃಷ್ಟಿಕೋನದ ಬಜೆಟ್ ಇದು ಎಂದರು.
ರೈತರಿಗೆ ಬಡ್ಡಿ ರಹಿತ ಸಾಲ ಮೂರರಿಂದ ಐದು ಲಕ್ಷ ರೂಗಳಿಗೆ ಏರಿಕೆ
ಶಾಲಾ ಕಾಲೇಜು ಮಕ್ಕಳಿಗೆ ಉಚಿತ ಬಸ್ ಪಾಸ್ ಸೌಲಭ್ಯ
ತೀರ್ಥಹಳ್ಳಿ ತೋಟಗಾರಿಕಾ ಸಂಸ್ಥೆಗೆ ಅಡಿಕೆ ಸಂಶೋಧನಾ ವಿಭಾಗಕ್ಕೆ ಹತ್ತು ಕೋಟಿ ರೂಗಳು.
ಹೈನುಗಾರರಿಗೆ ಪ್ರೋತ್ಸಾಹ ಧನ ವಿತರಣೆ
ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್
ಭೂ ಸಿರಿ ಹೊಸ ಯೋಜನೆ ಪ್ರಾರಂಭ, ರೈತರಿಗೆ ಹತ್ತು ಸಾವಿರ ರೂ ನೆರವು
ಯಶಸ್ವಿನಿ ಯೋಜನೆಗೆ ಅನುದಾನ ಬಿಡುಗಡೆ
ಹಾವೇರಿಯಲ್ಲಿ ಮೀನು ಮರಿ ಉತ್ಪಾದನಾ ಪಾಲನಾ ಕೇಂದ್ರ
ಆಶಾ, ಬಿಸಿಯೂಟ ತಯಾರಕರು ಸಹಾಯಕರು ಗ್ರಂಥಪಾಲಕದ ಗೌರವಧನ 1 ಸಾವಿರ ರೂಗಳ ಹೆಚ್ಚಳ
ಮುಖ್ಯಮಂತ್ರಿ ವಿದ್ಯಾ ಶುಲ್ಕ ಯೋಜನೆ ಪ್ರಾರಂಭ
ಗ್ರಹಿಣಿಯರಿಗೆ ಗೃಹಿಣಿಯರಿಗೆ
ತಿಂಗಳಿಗೆ 500 ರೂ ಧನಸಹಾಯ
ಹಳ್ಳಿ ಮುತ್ತು ಯೋಜನೆಯಡಿ
500 ವಿದ್ಯಾರ್ಥಿಗಳಿಗೆ ಸಿಇಟಿ ಆಧಾರಿತ ಶಿಕ್ಷಣಕ್ಕೆ ನೆರವು
ಹೊಸದಾಗಿ 7 ವಿಶ್ವವಿದ್ಯಾಲಯಗಳ ಸ್ಥಾಪನೆ
ಎಲ್ಲಾ ವಿವಿಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ವ್ಯವಸ್ಥೆ
ಉತ್ತರ ಕನ್ನಡದಲ್ಲಿ ನಾರಾಯಣ ಗುರು ವಸತಿ ಶಾಲೆ
ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ
ಹಾವೇರಿಯಲ್ಲಿ ಮೆಗಾ ಡೈರಿ ಸ್ಥಾಪನೆ
ಶಿವಮೊಗ್ಗದಲ್ಲಿ ಕ್ಯಾನ್ಸಲ್ ಆಸ್ಪತ್ರೆ ಸ್ಥಾಪನೆ
ಉಡುಪಿ ಜಿಲ್ಲೆಯಲ್ಲಿ ಯಕ್ಷ ರಂಗಾಯಣ ಸ್ಥಾಪನೆ
ದಾವಣಗೆರೆಯಲ್ಲಿ ಮೂರನೆಯ ವಿಶ್ವ ಕನ್ನಡ ಸಮ್ಮೇಳನ
ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಎರಡು ಕೋಟಿ ರೂಗಳ ನೆರವು
ಜಿಲ್ಲೆ ಹಾಗೂ ತಾಲೂಕು, ಸ್ಟೇಡಿಯಂಗಳಲ್ಲಿ 100 ಕೋಟಿ ವೆಚ್ಚದಲ್ಲಿ ಜಿಮ್ ಸ್ಥಾಪನೆ
ಖಾಸಗಿ ಕ್ರೀಡಾ ಸಂಸ್ಥೆಗಳಿಗೆ 25 ಲಕ್ಷ ರೂ ಪ್ರೋತ್ಸಾಹ ಧನ
ದೇಸಿ ಕ್ರೀಡಾಕೂಟ ಆಯೋಜನೆಗೆ ಅಂಕಣ ಸ್ಥಾಪನೆ
ಎಸ್ ಸಿ ಎಸ್ ಟಿ ಸಮುದಾಯಗಳಿಗೆ ಅಮರ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪೂರೈಕೆ
*ಜನಸ್ನೇಹಿ ಬಜೆಟ್ ಮಂಡಿಸುವೆ; ಸಿಎಂ ಬಸವರಾಜ್ ಬೊಮ್ಮಾಯಿ*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ