Belagavi NewsBelgaum NewsKannada NewsKarnataka News

*ವಿಧಾನ ಪರಿಷತ್ ಮಾಜಿ ಸದಸ್ಯೆ ಸುನಂದಾ ನಿಧನ*

ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ ಮಾಜಿ ಸದಸ್ಯೆ ಸುನಂದಾ ಲಿಂಗನಗೌಡ ಪಾಟೀಲ (71)ಅವರು  ಅನಾರೋಗ್ಯದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ 14/04/2024 ಬೆಳಿಗ್ಗೆ ನಿಧನರಾಗಿದ್ದಾರೆ. 

ಮೂಲತಃ ಹಿರೇ ಬಾಗೇವಾಡಿ ಗ್ರಾಮದವರಾದ ಇವರು ಒಂದು ಬಾರಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾಗಿ ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

Home add -Advt

ಮೃತರ ಅಂತ್ಯಸಂಸ್ಕಾರವನ್ನು ಇಂದು ಸಂಜೆ ಹಿರೇ ಬಾಗೇವಾಡಿ ಗ್ರಾಮದ ತೋಟದ ಮನೆಯಲ್ಲಿ ನೆರವೇರಿಸಲಾಗಿದೆ. ಮೃತರಿಗೆ ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಇದೆ.

Related Articles

Back to top button