Kannada NewsKarnataka NewsLatest

ಕುಸಿದು ಬಿದ್ದ ಕಾರವಾರ- ಗೋವಾ ಸಂಪರ್ಕ ಸೇತುವೆ: ಲಾರಿ ನೀರುಪಾಲು

ಪ್ರಗತಿವಾಹಿನಿ ಸುದ್ದಿ, ಕಾರವಾರ: ಕಾರವಾರ – ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಕೋಡಿಬಾಗ ಸೇತುವೆ ಕುಸಿದು ಬಿದ್ದಿದೆ.

ಕಾಳಿ ನದಿಗೆ ಅಡ್ಡಲಾಗಿ 43 ವರ್ಷದ ಹಿಂದೆ ಕಟ್ಟಲಾಗಿದ್ದ ಈ ಸೇತುವೆ ಮಧ್ಯರಾತ್ರಿ ಹೊತ್ತಿಗೆ ಕುಸಿದಿದ್ದು, ಲಾರಿಯೊಂದು ನದಿಗೆ ಬಿದ್ದಿಗೆ. ಪೊಲೀಸರು ಲಾರಿ ಚಾಲಕನನ್ನು ರಕ್ಷಿಸಿದ್ದಾರೆ. ಆದರೆ ಇದಕ್ಕೂ ಮೊದಲು ಯಾವುದಾದರೂ ವಾಹನ ಕೊಚ್ಚಿ ಹೋಗಿದೆಯೋ ಎನ್ನುವುದು ಗೊತ್ತಾಗಿಲ್ಲ.

ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪರಿಶೀಲನೆ ನಡೆಸುತ್ತಿದ್ದಾರೆ.

Related Articles

Back to top button