National

*ವಿಜಯೋತ್ಸವದ ವೇಳೆ ಅಗ್ನಿ ಅವಘಡ: ಬಣ್ಣದ ಬೆಂಕಿ; ನೂತನ ಶಾಸಕ ಸೇರಿ ಹಲವರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಚುನಾವಣೆ ಗೆದ್ದ ಖುಷಿಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ನಡೆಸಿದ ವಿಜಯೋತ್ಸವದ ವೇಳೆ ಅಗ್ನಿ ಅವಘಡ ಸಂಭವಿಸಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದ ಮಹಗಾಂವ್ ನಲ್ಲಿ ನಡೆದಿದೆ.

ಚಂದಗಢ ವಿಧಾನಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಶಿವಾಜಿ ಪಾಟೀಲ್ ಗೆದ್ದ ಖುಷಿಯಲ್ಲಿ ಅಭಿಮಾನಿಗಳು ಆರತಿ ಮಾಡುವ ಸಂದರ್ಭದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಆರತಿ ಮಾಡುವ ಸಂದರ್ಭದಲ್ಲಿ ಜೆಸಿಬಿ ಮೂಲಕ ಗುಲಾಲವನ್ನು (ಕೆಂಪು ಬಣ್ಣದ ಪುಡಿ) ಆರತಿ ಮೇಲೆ ಸುರಿಯಲಾಗಿದೆ. ಈ ವೇಳೆ ಏಕಾಏಕಿ ಬೆಂಕಿ ಪ್ರಮಾಣ ಹೆಚ್ಚಿ ಅವಘಡ ಸಂಭವಿಸಿದೆ.

Home add -Advt

ನೂತನ ಶಾಸಕ ಹಾಗೂ ಆರತಿ ಬೆಳಗುತ್ತಿದ್ದ ಮಹಿಳೆಯರು, ಕಾರ್ಯಕರ್ತರು ಸೇರಿ ಹಲವರು ಗಾಯಗೊಂಡಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ.


Related Articles

Back to top button