Belagavi NewsBelgaum NewsKannada NewsKarnataka NewsNational

*ನಗೆ ಬೇಕರಿ-ನಗಬೇಕ್ರಿ ಹಾಸ್ಯ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಹಾಸ್ಯಕೂಟದ 11 ನೇ ವಾರ್ಷೀಕೋತ್ಸವದ ನಿಮಿತ್ತವಾಗಿ ಇದೆ ದಿ. 17 ಗುರುವಾರ  ಸಾಯಂಕಾಲ 4:30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ “ನಗೆ ಬೇಕರಿ – ನಗಬೇಕ್ರಿ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಪ್ರಮುಖ ಭಾಷಣಕಾರರಾಗಿ ಖ್ಯಾತ ಹನಿಗವಿ ಎಚ್ ಡುಂಡಿರಾಜ್ ಆಗಮಿಸಲಿದ್ದಾರೆ.ಮ, ಅಧ್ಯಕ್ಷತೆಯನ್ನು ಖ್ಯಾತ ನ್ಯಾಯವಾದಿಗಳಾದ ಎಸ್. ಎಂ. ಕುಲಕರ್ಣಿಯವರು ವಹಿಸಿಕೊಳ್ಳಲಿದ್ದು ಅತಿಥಿಗಳಾಗಿ ರಂಗಸಂಪದದ ಅಧ್ಯಕ್ಷರಾದ ಅರವಿಂದ ಕುಲಕರ್ಣಿಯವರು ಆಗಮಿಸಲಿದ್ದಾರೆ. 

ಪ್ರಾಯೋಜಕತ್ವವನ್ನು ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಅರವಿಂದ ಹುನಗುಂದ ವಹಿಸಿಕೊಂಡಿದ್ದಾರೆ. ಪ್ರಾಸ್ತಾವಿಕ ನುಡಿಯನ್ನು ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಆಡಲಿದ್ದಾರೆ.

ಪ್ರವೇಶ ಉಚಿತವಾಗಿದ್ದು  ಹಾಸ್ಯಪ್ರಿಯರು ಈ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ನಕ್ಕು ಹಗುರಾಗುವಂತೆ  ಕ.ಸಾ.ಭ. ವಿಶ್ವಸ್ತ ಮಂಡಳಿಯ ಗೌರವ ಕಾರ್ಯದರ್ಶಿ  ರಾಮಚಂದ್ರ ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button