World

*ಆಕಸ್ಮಿಕವಾಗಿ ಗಡಿ ದಾಟಿದ ಭಾರತೀಯ ಯೋಧನನ್ನು ಮರಳಿ ಕಳುಹಿಸಲು ನಿರಾಕರಿಸಿದ ಪಾಕಿಸ್ತಾನ*

ಪ್ರಗತಿವಾಹಿನಿ ಸುದ್ದಿ: ಆಕಸ್ಮಿಕವಾಗಿ ಪಂಜಾಬ್ ಗಡಿ ದಾಟಿದ ಗಡಿ ಭದ್ರತಾ ಪಡೆ ಜವಾನ ಪಿಕೆ ಸಿಂಗ್ ಅವರನ್ನು ಪಾಕಿಸ್ತಾನದ ರೇಂಜರ್‌ಗಳು ಬಂಧಿಸಿದ್ದಾರೆ. ಭಾರತಕ್ಕೆ ಮರಳಿ ಕಳಯಹಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.‌

ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಉಗ್ರರ ಭೀಕರ ದಾಳಿಯಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಇದರ ನಡುವೆ ಭಾರತೀಯ ಯೋಧ ಪಾಪಿ ಪಾಕಿಸ್ತಾನಿಗಳ ಕೈಯಲ್ಲಿ ಸಿಲುಕಿದ್ದು, ಅವರನ್ನು ಭಾರತಕ್ಕೆ ಹಿಂದಿರುಗಿಸಲು ಈಗ ಪಾಕಿಸ್ತಾನ ನಿರಾಕರಿಸಿದೆ. 

Home add -Advt

ಈ ಹಿನ್ನೆಲೆ ಜಿನಿವಾ ಒಪ್ಪಂದ ಮತ್ತೆ ಮುನ್ನೆಲೆಗೆ ಬಂದಿದೆ. ಗಾಯಗೊಂಡ ಸೈನಿಕರು, ಯುದ್ಧ ಭೂಮಿಯ ಸುತ್ತಮುತ್ತ ಸೆರೆ ಸಿಕ್ಕ ಜನರ ಹಕ್ಕುಗಳ ರಕ್ಷಣೆ ಬಗ್ಗೆ ಹಲವು ಮಾರ್ಗಸೂಚಿಗಳನ್ನು ಈ ಒಪ್ಪಂದ ಒಳಗೊಂಡಿದೆ. 

ಜಿನೀವಾ ಒಪ್ಪಂದದ ಪ್ರಕಾರ ಗಾಯಗೊಂಡ ಸೈನಿಕ ಸೆರೆ ಸಿಕ್ಕರೆ ಆತನನ್ನು ಹಿಂಸಿಸುವುದು ಅಥವಾ ಹತ್ಯೆ ಮಾಡುವುದು ನಿಷೇಧ. ಆತನ ಧರ್ಮ, ಬಣ್ಣ ಲಿಂಗ ಬೇಧವಿಲ್ಲದೆ ಚಿಕಿತ್ಸೆ ನೀಡಬೇಕು. ಸೂಕ್ತ ಆಹಾರ, ಆಶ್ರಯ ನೀಡಬೇಕು.

 ಆದರೂ ಪಾಕಿಸ್ತಾನ ಯೋಧನನ್ನು ಹಸ್ತಾಂತರಿಸಲು ನಿರಾಕರಿಸುತ್ತಿದೆ ಎನ್ನಲಾಗಿದೆ. ಇಂದಿನ ಧ್ವಜ ಸಭೆಗೂ ರೇಂಜರ್‌ಗಳು ಆಗಮಿಸಿಲ್ಲ ಎನ್ನಲಾಗುತ್ತಿದ್ದು, ಮತ್ತೊಂದೆಡೆ ಪಾಕಿಗಳ ಕೈಯಲ್ಲಿ ಭಾರತೀಯ ಜವಾನನನ್ನು ಪಾಕಿಸ್ತಾನ ಮಾಧ್ಯಮಗಳಲ್ಲಿ ತಮ್ಮ ಪ್ರಚಾರಕ್ಕಾಗಿ ಬಳಸುತ್ತಿದೆ.

Related Articles

Back to top button