National

*ಭಾರತೀಯರ ತಂಟೆಗೆ ಬಂದ್ರೆ ಶಿಕ್ಷೆ ಘೋರವಾಗಿರುತ್ತೆ: ಆಪರೇಷನ್ ಸಿಂಧೂರ್ ಕೇವಲ ಹೆಸರಲ್ಲ ಎಚ್ಚರಿಕೆ ಸಂದೇಶ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ಭಾರತದ ಮೇಲೆ ದಾಳಿ ನಡೆಸಿದ ಭಯೋತ್ಪಾದಕರಿಗೆ ಸೇನೆ ತಕ್ಕ ಉತ್ತರ ನೀಡಿದೆ. ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಯಶಸ್ವಿಯಾಗಿದೆ. ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಬಗ್ಗೆ ಹೆಮ್ಮೆ ಇದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಶ್ರೀನಗರದ ಸೇನಾ ಕಚೇರಿಯಲ್ಲಿ ಬಾರತೀಯ ಸೇನೆ ಉದ್ದೇಶಿಸಿ ಮಾತನಾಡಿದ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನ ಹಾಗೂ ಪಹಲ್ಗಾಮ್ ಉಗ್ರರ ದಾಳಿಗೆ ತಕ್ಕ ಪಾಠ ಕಲಿಸಿದ್ದೇವೆ. ಭಾರತ ಶಾಂತಿ ಪ್ರಿಯ ದೇಶ ಎಂಬುದು ಜಗತ್ತಿಗೆ ಗೊತ್ತಿದೆ. ಆದರೆ ಭಾರತೀಯರ ತಂಟೆಗೆ ಬಂದರೆ ಶಿಕ್ಷೆ ಘೋರವಾಗಿರುತ್ತದೆ. ಮಣ್ಣಲ್ಲಿ ಹೂತು ಹಾಕುತ್ತೇವೆ. ‘ಆಪರೇಷನ್ ಸಿಂಧೂರ್’ ಕೇವಲ ಹೆಸರಲ್ಲ, ‘ಆಪರೇಷನ್ ಸಿಂಧೂರ್’ ಎಚ್ಚರಿಕೆಯ ಸಂದೇಶ ಎಂದು ಹೇಳಿದರು.

Home add -Advt

ಇನ್ಮುಂದೆ ಉಗ್ರರ ದಾಳಿಯನ್ನು ಯುದ್ಧ ಎಂದು ಕರೆಯುತ್ತೇವೆ. ಪಾಕಿಸ್ತಾನದ ಯಾವುದೇ ನ್ಯೂಕ್ಲಿಯರ್ ಬ್ಲ್ಯಾಕ್ ಮೇಲ್ ಗೆ ಹೆದರುವುದಿಲ್ಲ. ಭಾರತಕ್ಕೆ ದ್ರೋಹ ಬಗೆದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದೇವೆ. ಪಾಕಿಸ್ತಾನಕ್ಕೆ ಭಾರತೀಯ ಸೇನೆ ನುಗ್ಗಿ ಹೊಡೆದಿದೆ. ಸೇನೆಯ ಪರಾಕ್ರಮ, ಶೌರ್ಯ, ತಾಕತ್ತು ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನದ ಯಾವುದೇ ಬೆದರಿಕೆಗೂ ಬಗ್ಗುವ ಮಾತೇ ಇಲ್ಲ ಎಂದು ಎಚ್ಚರಿಸಿದರು.

ಪಹಲ್ಗಾಮ್ ನಲ್ಲಿ ಉಗ್ರರು ಅಮಾಯಕ ನಾಗರಿಕರನ್ನು ಹತ್ಯೆ ಮಡಿದರು. ಧರ್ಮ ಕೇಳಿ ಉಗ್ರರು ಅಮಾಯಕರನ್ನು ಕೊಂದ್ರು. ಉಗ್ರರ ಕರ್ಮ ನೋಡಿ ನಾವು ಹೊಡೆದಿದ್ದೇವೆ. ಉಗ್ರರು ಹಾಗೂ ಪಾಕಿಸ್ತಾನ ಕರ್ಮ ನುಭವಿಸಿದೆ. ಪಾಕ್ ಗೆ ಭಾರತೀಯ ಸೇನೆ ತಕ್ಕ ಶಿಕ್ಷೆ ಕೊಟ್ತಿದೆ. ಸೇನಾಧಿಕಾರಿಗಳಿಗೆ, ಯೋಧರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Related Articles

Back to top button