CrimeKannada NewsKarnataka NewsNationalPolitics

*ದುಬೈ ವಿಮಾನ ನಿಲ್ದಾಣ ಬಂದ್ ಇದ್ರು ಬೆಂಗಳೂರಿಗೆ ವಾಪಸ್ ಆದ ಶಾಸಕ*

ಪ್ರಗತಿವಾಹಿನಿ ಸುದ್ದಿ: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕಾ ನಡೆಸುತ್ತಿರುವ ದಾಳಿಯಿಂದಾಗಿ ವಿಮಾನ ಹಾರಾಟಗಳು ಸ್ಥಗಿತಗೊಂಡಿದೆ. ಇದರ ಪರಿಣಾಮ ಅನೇಕರು ವಿದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದ್ರೆ ಪುಲಿಕೇಶಿ ನಗರದ ಶಾಸಕ ಎಸಿ ಶ್ರೀನಿವಾಸ್ ಅವರು ವಾಪಸ್ ಆಗಿದ್ದಾರೆ.

ಹೌದು, ಪುಲಿಕೇಶಿ ನಗರದ ಶಾಸಕ ಎಸಿ ಶ್ರೀನಿವಾಸ್ ಕೂಡ ಅನೇಕರ ರೀತಿ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದರು. ಆದ್ರೆ ಪರಿಸ್ಥಿತಿ ತಿಳಿದ ಕೂಡಲೇ ದುಬೈಯಿಂದ ರಸ್ತೆ ಮಾರ್ಗವಾಗಿ 6 ಗಂಟೆಗಳ ಪ್ರಯಾಣದ ಮೂಲಕ ಮಸ್ಕಟ್ ತಲುಪಿ ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ಸುರಕ್ಷಿತವಾಗಿ ಬಂದಿದ್ದಾರೆ. 

Home add -Advt

ಆರು ಗಂಟೆಗಳ ಪ್ರಯಾಣದ ಬಳಿಕ ಅವರು ಇಂದು (ಮಾ.2) ಬೆಳಿಗ್ಗೆ ಸುರಕ್ಷಿತವಾಗಿ ತಮ್ಮ ಮನೆ ಸೇರಿದ್ದಾರೆ. ಇನ್ನು ದುಬೈ ದೋಹಾ, ಅಬುಧಾಬಿ, ಜಿಹ್ವಾ, ಬಹ್ರನ್ ಕಡೆಗೆ ತೆರಳಬೇಕಿದ್ದ ಹಾರಾಟಗಳು ಸ್ಥಗಿತಗೊಂಡಿದ್ದು, ಪ್ರಯಾಣಿಕರು ಮರುಬುಕಿಂಗ್‌ಗಾಗಿ ಕೌಂಟರ್‌ಗಳಲ್ಲಿ ಮಾಹಿತಿ ಪಡೆದು ವಾಪಸ್ಸಾಗುತ್ತಿದ್ದಾರೆ. ಮೂರನೇ ದಿನವೂ ಹಾರಾಟ ಇಲ್ಲದೆ, ಮನೆ ಸೇರುವ ನಿರೀಕ್ಷೆಯಲ್ಲಿ ಜನ ಆತಂಕದಲ್ಲೇ ಕಾದಿದ್ದಾರೆ.

Related Articles

Back to top button