Film & EntertainmentKarnataka NewsLatestPolitics

*ಕರ್ನಾಟಕಕ್ಕೆ ಬೇಕಿರುವುದು ಕೇವಲ ಸಿಎಂ ಬದಲಾವಣೆ ಅಲ್ಲ… ಈ ಜನವಿರೋಧಿ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ಬದಲಾವಣೆ: ಆರ್.ಅಶೋಕ್*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕಕ್ಕೆ ಇಂದು ಬೇಕಿರುವುದು ಕೇವಲ ಮುಖ್ಯಮಂತ್ರಿ ಬದಲಾವಣೆ ಅಲ್ಲ… ಈ ಜನವಿರೋಧಿ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ಬದಲಾವಣೆ! ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗುಡುಗಿದ್ದಾರೆ.

2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯದಲ್ಲಿ ಆಡಳಿತ ಎನ್ನುವುದು ಸಂಪೂರ್ಣ ಮರೀಚಿಕೆಯಾಗಿದೆ. ಅಭಿವೃದ್ಧಿ, ಜನಸಮಸ್ಯೆ, ರೈತರ ಸಂಕಷ್ಟ, ಯುವಕರ ಭವಿಷ್ಯ, ಇವೆಲ್ಲವೂ ಗೌಣವಾಗಿದೆ, “ಕುರ್ಚಿ ಯಾರಿಗೆ?” ಎನ್ನುವ ಒಂದೇ ಪ್ರಶ್ನೆ ಸರ್ಕಾರವನ್ನು ನುಂಗಿಬಿಟ್ಟಿದೆ.

“ಅಧಿಕಾರ ಹಂಚಿಕೆ” ಎಂಬ ಪ್ರಹಸನ ಈಗ ಬೀದಿ ನಾಟಕದ ಮಟ್ಟಕ್ಕೆ ಇಳಿದಿದೆ. ಎಗ್ಗಿಲ್ಲದೆ ನಡೆಯುತ್ತಿರುವ ಕುರ್ಚಿ ಕದನ ಇಡೀ ಕರ್ನಾಟಕದ ಮಾನವನ್ನು ದೇಶದ ಮುಂದೆ ಹರಾಜು ಹಾಕುತ್ತಿದೆ. ಪ್ರಜಾಸೌಧದಲ್ಲಿ ಆಡಳಿತದ ಚರ್ಚೆ ಇಲ್ಲ… ಬರಿ ಅಧಿಕಾರದ ಲೆಕ್ಕಾಚಾರ ಮಾತ್ರ ಎನ್ನುವಂತಾಗಿದೆ!

ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕಾದ ಸತ್ಯ ಒಂದೇ. ಸಿದ್ದರಾಮಯ್ಯನವರೇ ಮುಂದುವರಿಯಲಿ, ಡಿ.ಕೆ. ಶಿವಕುಮಾರ್ ಬರಲಿ ಅಥವಾ ಮತ್ತೊಬ್ಬರನ್ನು ಕೂರಿಸಲಿ… ಈ ದಿವಾಳಿ ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ನಯಾ ಪೈಸೆ ಪ್ರಯೋಜನವಿಲ್ಲ ಎಂದು ಕಿಡಿಕಾರಿದ್ದಾರೆ.

Home add -Advt

ಏಕೆಂದರೆ ಇವರಿಗೆ:

  • ರಾಜ್ಯದ ಅಭಿವೃದ್ಧಿಯ ಬಗ್ಗೆ ದೃಷ್ಟಿಯಿಲ್ಲ.
  • ರೈತರ ಕಣ್ಣೀರಿನ ಬಗ್ಗೆ ಕಾಳಜಿಯಿಲ್ಲ.
  • ಯುವಕರ ಭವಿಷ್ಯದ ಬಗ್ಗೆ ಚಿಂತೆಯಿಲ್ಲ.
  • ಜನರ ಸಮಸ್ಯೆಗಳ ಬಗ್ಗೆ ಉತ್ತರದಾಯಿತ್ವವೇ ಇಲ್ಲ.

ಇವರಿಗೆ ಇರುವುದು ಒಂದೇ ಅಜೆಂಡಾ:
ಕುರ್ಚಿ, ಅಧಿಕಾರ, ಲೂಟಿ ಮತ್ತು ಸ್ವಾರ್ಥ ರಾಜಕಾರಣ!

ಕರ್ನಾಟಕದ ಜನರ ಸಹನೆಯನ್ನು ಕಾಂಗ್ರೆಸ್ ದುರ್ಬಲತೆ ಎಂದು ಭಾವಿಸಬಾರದು. ಕನ್ನಡಿಗರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟು ಒಳಜಗಳದಲ್ಲಿ ಮುಳುಗಿರುವ ಈ ಜನವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಉತ್ತರ ನೀಡುವ ದಿನ ದೂರವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

What Karnataka needs today is not merely a change of Chief Minister… it needs a complete change of this anti-people Congress government! R.Ashok

What Karnataka needs today is not merely a change of Chief Minister… it needs a complete change of this anti-people Congress government!

Ever since the @INCKarnataka came to power in 2023, governance in Karnataka has become a mirage. Development, public welfare, farmers’ distress, and the future of our youth have all taken a backseat. The government is consumed by just one question – “Who gets the chair?”

The so-called “power-sharing arrangement” has now degenerated into a full-blown political circus. This endless power struggle has not only paralysed administration but has also reduced Karnataka’s dignity in the eyes of the nation. Vidhana Soudha today is no longer a centre of governance – it has become a battlefield for political calculations and survival.

Kannadigas must understand one truth clearly:

Whether @siddaramaiah continues, @DKShivakumar takes over, or someone else is imposed by the @INCIndia high command, this bankrupt Congress government has absolutely nothing meaningful to offer the people of Karnataka.

Because this government has:

  • No vision for Karnataka’s development.
  • No concern for struggling farmers.
  • No roadmap for the aspirations of the youth.
  • No accountability towards public issues.

Their only agenda is:
Power. Position. Loot. And selfish politics.

Congress must not mistake the patience of Kannadigas for weakness. People of Karnataka are watching everything closely. The day is not far when the people of Karnataka will give a fitting response to this power-hungry and anti-people government.

Related Articles

Back to top button