Karnataka NewsLatestPolitics

*ವಿಶೇಷ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್*

ಪ್ರಗತಿವಾಹಿನಿ ಸುದ್ದಿ: ಹಲವು ವಿಷಯಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ವಿಧಾನಮಂಡಲ ವಿಶೇಷ ಅಧಿವೇಶನ ಕರೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್​​ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್, ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಭೀಕರ ಬರಗಾಲ ಎದುರಾಗಿದೆ.ಈ ವರ್ಷ 150 ವರ್ಷಗಳಲ್ಲೇ ಕಂಡಿರಿಯದ ಬರಗಾಲವಿದೆ. ಸೂಪರ್ ಎಲ್ ನಿನೋ ಪರಿಣಾಮ ಈ ಸ್ಥಿತಿ ಇದ್ದು, ಇದರ ನೇರ ಪರಿಣಾಮ ರೈತರು, ಆರ್ಥಿಕತೆ. ಆಹಾರದ ಮೇಲೆ ಬೀಳುತ್ತಿದೆ. ಇವುಗಳನ್ನು ಚರ್ಚಿಸಲು ಸೆ.21ರಿಂದ ಮೂರು ದಿನ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದರು.

Home add -Advt

ಕಸ್ತೂರಿ ರಂಗನ್ ವರದಿ ಈಗ ಮತ್ತೆ ಚರ್ಚೆಗೆ ಬಂದಿದ್ದು, ಈಗಾಗಲೇ ನಾಲ್ಕೈದು ಬಾರಿ ಇದನ್ನು ತಿರಸ್ಕರಿಸಿದ್ದೇವೆ. ಆದರೂ ಇನ್ನು ಅದರ ಬಗ್ಗೆ ಚರ್ಚೆಗಳು ಆಗುತ್ತಿವೆ. ಈ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ಆಗಬೇಕಿದೆ. ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೆ.21, 22 ಹಾಗೂ 23ರಂದು ವಿಶೇಷ ಅಧಿವೇಶನ ನಡೆಸಲಾಗುವುದು ಎಂದರು.

Related Articles

Back to top button