Belagavi NewsBelgaum NewsKannada NewsKarnataka NewsPolitics

*ನಾಗಪ್ಪ ರಾಮಚಂದ್ರ ಮಿಸಾಳೆ ಪ್ರತಿಷ್ಠಾನದ ವತಿಯಿಂದ  ಆದರ್ಶ ಶಿಕ್ಷಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ* 

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ , ಪ್ರೌಢಶಾಲಾ ಶಿಕ್ಷಕರಿಗೆ 2026-27 ನೇ ಸಾಲಿನ ಜಿಲ್ಲಾಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ನಿವೃತ್ತಿ ಹೊಂದಿದ ಶಿಕ್ಷಕರಿಗೆ ಜೀವನ ಗೌರವ ಪ್ರಶಸ್ತಿ ಹಾಗೂ     ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ  ಪ್ರಾಥಮಿಕ ವಿದ್ಯಾರ್ಥಿಗಳಿಗೆ ವಿಶೇಷ ಪ್ರಶಸ್ತಿಗಳಿಗಾಗಿ ನಾಗಪ್ಪ ರಾಮಚಂದ್ರ ಮಿಸಾಳೆ ಪ್ರತಿಷ್ಠಾನ ಮಾರಿಹಾಳ ಇವರ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.  

ಶಾಲಾ ಶಿಕ್ಷಕರು ಕನಿಷ್ಠ 20 ವರ್ಷಗಳ ಅನುಭವ  ಹೊಂದಿರಬೇಕು. ನಿವೃತ್ತ ಶಿಕ್ಷಕರು ಕನಿಷ್ಠ 75 ವಯಸ್ಸು ದಾಟಿರಬೇಕು. ಅರ್ಹರು ದಾಖಲೆಗಳೊಂದಿಗೆ ಅರ್ಜಿಗಳನ್ನು ಡಾ.ಡಿ .ಎನ್. ಮಿಸಾಳೆ ,ಪ್ಲಾಟ್  ನಂಬರ್ 19, ಪಿ ಅಂಡ್ ಟಿ  ಕಾಲೋನಿ, ಹನುಮಾನ್ ನಗರ, 2ನೇ ಹಂತ ಬೆಳಗಾವಿ 590019 ಇವರಿಗೆ ದಿನಾಂಕ್ 5- 10 -2026 ರ ಒಳಗೆ  ತಲುಪುವಂತೆ  ಕಳುಹಿಸಬೇಕು. 

Home add -Advt

ಪುರಸ್ಕಾರ ರೂಪದಲ್ಲಿ ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು   ಪ್ರಮಾಣ ಪತ್ರಗಳನ್ನು ಪ್ರಧಾನ  ಮಾಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ರವಿವಾರ ದಿನಾಂಕ 18-10 -2026 ರಂದು  ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದಲ್ಲಿ 10 ಗಂಟೆಗೆ ನೆರವೇರುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 948039 8025,  ಅಥವಾ 9448691484 ಸಂಪರ್ಕಿಸಬಹುದು.

Related Articles

Back to top button