*ಬದುಕಿರುವ ವ್ಯಕ್ತಿಗಳ ಮರಣ ಪ್ರಮಾಣ ಪತ್ರ ತೋರಿಸಿದ ಶಾಸಕ: ಡಿಸಿ ಮುಂದೆ ಪ್ರತ್ಯಕ್ಷವಾದ ಸತ್ತಿದ್ದಾರೆ ಎನ್ನಲಾದ 8 ಜನರು: ಮುಂದೇನಾಯ್ತು?*

ಶಾಸಕ ಯತ್ನಾಳ್ ಯಡವಟ್ಟು
ಪ್ರಗತಿವಾಹಿನಿ ಸುದ್ದಿ: ಎಸ್ ಐಆರ್ ಪ್ರಕ್ರಿಯೆ ಗೊಂದಲ ಫಾರ್ಮ್ -೭ ದುರ್ಬಳಕೆ ಆರೋಪ ಪ್ರಕರಣಗಳು ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಪಕ್ಷ ಬಿಜೆಪಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ಜಟಾಪಟಿಗೆ ಕಾರಣವಾಗಿದೆ.
ಈ ನಡುವೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಡವಟ್ಟು ಮಾಡಿಕೊಂಡು ಪೇಚಿಗೆ ಸಿಲುಕಿದ್ದಾರೆ. ಬದುಕಿರುವ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿ, ಮೃತಪಟ್ಟವರ ಹೆಸರೂ ಮತದಾರರ ಪಟ್ಟಿಯಲ್ಲಿದೆ ಎಂದು ಆರೋಪಿಸಿದ್ದರು.
ಸೆ.30ರಂದು 8 ಮತದಾರರ ಮರಣ ಪ್ರಮಾಣ ಪತ್ರ ಪ್ರದರ್ಶಿಸಿ ಶಾಸಕರು ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ಆರೋಪಿಸಿದ್ದರು. ಆದರೆ, ಇದೀಗ ಆ ಎಂಟು ಮತದಾರರು ಪ್ರತ್ಯಕ್ಷರಾಗಿದ್ದು, ನಾವು ಮೃತಪಟ್ಟಿಲ್ಲ, ಜೀವಂತವಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಮುಂದೆ ಹಾಜರಾಗಿದ್ದಾರೆ.
ನಮ್ಮ ಡೆತ್ ಸರ್ಟಿಫಿಕೇಟ್ ಶಾಸಕ ಯತ್ನಾಳ್ ಕೈಗೆ ಹೇಗೆ ಸಿಕ್ಕಿತು? ಮತದಾರರ ಪಟ್ಟಿಯಿಂದ ಹೆಸರು ತೆಗೆಸಲು ಹುನ್ನಾರ ನಡೆದಿದೆ . ಜೀವಂತ ವ್ಯಕ್ತಿಗಳ ಮರಣ ಪತ್ರ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಪಾಲಿಕೆಯಿಂದ ನೀಡಿದ ಮರಣ ಪ್ರಮಾಣ ಪತ್ರ ನಕಲಿಯೋ? ಅಸಲಿಯೋ? ಪಾಲಿಕೆ ಸಿಬ್ಬಂದಿಯಿಂದಲೇ ಗೋಲ್ಮಾಲ್ ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಜೀವಂತ ವ್ಯಕ್ತಿಗಳ ಡೆತ್ ಸರ್ಟಿಫಿಕೇಟ್ ನೀಡಿದವರ ಪತ್ತೆಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




