Latest

*ಹಾವು ಹಿಡಿದು ಯುವತಿಯರತ್ತ ಎಸೆದ ಹುಚ್ಚಾಟ*: *ಗಣೇಶ ವಿಸರ್ಜನೆಯಲ್ಲಿ ಯುವಕನಿಗೆ ಪೊಲೀಸರ ಪಾಠ*

ಪ್ರಗತಿವಾಹಿನಿ ಸುದ್ದಿ: ಗಣೇಶ ವಿಸರ್ಜನೆಯ ಸಂಭ್ರಮದ ನಡುವೆ ಮಏಕಾಏಕಿ ಹಾವೊಂದು ಕಾಣಿಸಿಕೊಂಡಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕ ಮೂಡಿಸಿದೆ. ಆದರೆ ಹಾವನ್ನು ಕಂಡು ದೂರ ಸರಿಯಬೇಕಿದ್ದ ಯುವಕನೊಬ್ಬ ಮಾಡಿದ್ದೇ ಬೇರೆ! ನೀರಿನಲ್ಲಿ ಸಿಕ್ಕ ಹಾವನ್ನು ಹಿಡಿದು ಯುವತಿಯರತ್ತ ಎಸೆದಿದ್ದಾನೆ. ಯುವಕನ ಈ ಹುಚ್ಚಾಟದಿಂದ ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಪರಿಸ್ಥಿತಿ ಗೊಂದಲಕ್ಕೆ ತಿರುಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಮಧ್ಯಪ್ರವೇಶಿಸಿ ಯುವಕನಿಗೆ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಾಗಮಂಗಲದ ಪ್ರಸಿದ್ಧ ಕೋಟೆ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ವಿಸರ್ಜನೆಗಾಗಿ ಕೆರೆಯ ಬಳಿ ಜನರು ಸೇರಿದ್ದ ಸಂದರ್ಭದಲ್ಲಿ ನೀರಿನಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಈ ವೇಳೆ ಯುವಕನೊಬ್ಬ ಹಾವನ್ನು ಹಿಡಿದು ಕೆರೆಯ ದಡದಲ್ಲಿ ನಿಂತಿದ್ದ ಯುವತಿಯರತ್ತ ಎಸೆದಿದ್ದಾನೆ.

ಇದರಿಂದ ಯುವತಿಯರು ಮಾತ್ರವಲ್ಲದೆ ಸುತ್ತಮುತ್ತಲಿದ್ದ ಸಾರ್ವಜನಿಕರೂ ಆತಂಕಗೊಂಡಿದ್ದಾರೆ. ಏಕಾಏಕಿ ಹಾವು ಎಸೆದಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಯುವಕನ ಹುಚ್ಚಾಟವನ್ನು ಗಮನಿಸಿದ ಪೊಲೀಸ್ ಸಿಬ್ಬಂದಿಯೊಬ್ಬರು ತಕ್ಷಣ ಮಧ್ಯಪ್ರವೇಶಿಸಿದ್ದಾರೆ. ಆತನನ್ನು ತರಾಟೆಗೆ ತೆಗೆದುಕೊಂಡು ಹಲವು ಬಾರಿ ಕೆನ್ನೆಗೆ ಹೊಡೆದು ಎಚ್ಚರಿಸಿದ್ದಾರೆ. ಗಣೇಶ ವಿಸರ್ಜನೆಯ ಸಂಭ್ರಮದ ನಡುವೆ ನಡೆದ ಈ ಘಟನೆ ಸ್ಥಳದಲ್ಲಿ ಕೆಲಕಾಲ ಭಾರಿ ಚರ್ಚೆಗೆ ಕಾರಣವಾಗಿದೆ.

Related Articles

Back to top button