Latest

ಇಂದು ರಾತ್ರಿಯಿಂದಲೇ ರಾಜ್ಯದಲ್ಲಿ ಕರ್ಫ್ಯೂ ಜಾರಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಇದೀಗ ರಾಜ್ಯದಲ್ಲಿ ಸೆಕೆಂಡ್ ಸಂಡೇ ಲಾಕ್‍ಡೌನ್ ಇಂದು ರಾತ್ರಿಯಿಂದಲೇ ಜಾರಿಯಾಗಲಿದೆ.

ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಬರೋಬ್ಬರಿ 33 ಗಂಟೆಗಳ ಕಾಲ ಕರ್ಫ್ಯೂ ಜಾರಿಯಾಗಲಿದೆ. ತುರ್ತು, ಅಗತ್ಯ ಸೇವೆ ಹೊರತುಪಡಿಸಿ ಉಳಿದವೆಲ್ಲಾ ಕಂಪ್ಲೀಟ್ ಬಂದ್ ಆಗಲಿದೆ. ಕೊರೊನಾ ತಡೆಗೆ ಈಗಾಗಲೇ ಹಲವೆಡೆ ಸೆಲ್ಫ್ ಲಾಕ್‍ಡೌನ್ ಮಾಡಲಾಗಿದೆ.

Home add -Advt

ರಾಜ್ಯದಲ್ಲಿ ಶುಕ್ರವಾರ 2,313 ಮಂದಿಗೆ ಕೋವಿಡ್-19 ಸೋಂಕು ತಗಲುವ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 33,418ಕ್ಕೆ ಏರಿಕೆಯಾಗಿದೆ.

ಹಣ್ಣು, ತರಕಾರಿ, ದಿನಸಿ ಪದಾರ್ಥ ಖರೀದಿಗೆ ಅವಕಾಶವಿರಲಿದ್ದು, ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್ ತೆರೆದಿರಲಿವೆ. ಡಾಕ್ಟರ್ಸ್, ನರ್ಸ್, ಅಂಬುಲೆನ್ಸ್ ಓಡಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಹೋಟೆಲ್‍ಗಳಲ್ಲಿ ಪಾರ್ಸಲ್ ಮಾತ್ರ ಲಭ್ಯವಿರಲಿವೆ.

Related Articles

Back to top button