Latest

ಕಾರು ಕಲಿಯಲು ಮುಂದಾದ ಅಪ್ರಾಪ್ತ ಬಾಲಕ; ಒಂದೇ ಕುಟುಂಬದ ಮೂವರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಅಪ್ರಾಪ್ತ ಬಾಲಕನೊಬ್ಬ ಕಾರು ಕಲಿಯುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಮೈಸೂರು-ಬೆಂಗಳೂರು ರಸ್ತೆಯಲ್ಲಿ ನಡೆದಿದೆ.

9ನೇ ತರಗತಿಯ ವಿದ್ಯಾರ್ಥಿ ಕಾರು ಕಲಿಯಲೆಂದು ಮುಖ್ಯರಸ್ತೆಯಲ್ಲಿ ಕಾರು ಚಲಾಯಿಸಿದ್ದಾನೆ. ಆದರೆ ಕಾರು ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಗುದ್ದಿ, ಬಳಿಕ ರಸ್ತೆ ವಿಭಜಕಕ್ಕೆ ಡಿಕ್ಕಿಹೊಡೆದಿದೆ. ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

Home add -Advt

ಮೃತರನ್ನು ರಮೇಶ್(41), ಪತ್ನಿ ಉಷಾ (36) ಹಾಗೂ ಪುತ್ರ ಮನೀಷ್ (5) ಎಂದು ಗುರುತಿಸಲಾಗಿದೆ.

Related Articles

Back to top button