Latest

ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡುಗೂ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಕೊರೊನಾ ಮೂರನೇ ಅಲೆಯ ಅಟ್ಟಹಾಸ ಹೆಚ್ಚುತ್ತಿದ್ದು, ಚಿತ್ರರಂಗ, ರಾಜಕೀಯ, ಉದ್ಯಮ ವಲಯ, ಶಾಲಾ-ಕಾಲೇಜು ಹೀಗೆ ಎಲ್ಲಾ ಕ್ಷೇತ್ರದ ಜನರಿಗೂ ಸೋಂಕು ಹರಡುತ್ತಿದೆ. ಇದೀಗ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡುಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿಶ್ವಿಕಾ ಮಾಹಿತಿ ಹಂಚಿಕೊಂಡಿದ್ದು, ನನಗೆ ಕೊರೊನಾ ಸೋಂಕು ತಗುಲಿದ್ದು, ವೈದ್ಯರ ಸಲಹೆಯಂತೆ ಹೋಂ ಐಸೋಲೇಷನ್ ನಲ್ಲಿದ್ದೇನೆ. ಎಲ್ಲಾ ರೀತಿಯ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಿದ್ದೇನೆ. ಇತ್ತೀಚೆಗೆ ನನ್ನ ಜತೆ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಲಿ ಎಂದು ಮನವಿ ಮಾಡಿದ್ದಾರೆ.

Home add -Advt

ನಿಶ್ವಿಕಾ ನಾಯ್ಡು ಕನ್ನಡದ ವಾಸು ನಾನ್ ಪಕ್ಕಾ ಕಮರ್ಷಿಯಲ್, ಜಂಟಲ್ ಮ್ಯಾನ್, ರಾಮಾರ್ಜುನ, ಸಕತ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಮೇಕೆದಾಟು ಹೋರಾಟಕ್ಕೆ ಸಜ್ಜಾದ ಕಾಂಗ್ರೆಸ್; ಪಾದಯಾತ್ರೆಗೆ ನಾಳೆ ಬೆಳಿಗ್ಗೆ 8.50ರ ಶುಭ ಮುಹೂರ್ತ ಏಕೆ ಗೊತ್ತೇ?

Related Articles

Back to top button