Latest
ಏಕಲವ್ಯ ಪ್ರಶಸ್ತಿ ವಿಜೇತೆ ಆತ್ಮಹತ್ಯೆಗೆ ಶರಣು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡು ಏಕಲವ್ಯ ಪ್ರಶಸ್ತಿ ವಿಜೇತೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.
ಶಿಲ್ಪಾ (41) ಆತ್ಮಹತ್ಯೆಗೆ ಶರಣಾದ ಮಹಿಳೆ. ಶಿಲ್ಪಾ ಹಾಗೂ ಬಾಲರಾಜ್ ಗೆ ಮದುವೆಯಾಗಿ ಹಲವು ವರ್ಶಗಳಾದರೂ ಮಕ್ಕಳಿರಲಿಲ್ಲ. ಇದು ಶಿಲ್ಪಾ ನೋವಿಗೆ ಕಾರಣವಾಗಿತ್ತು. ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಾ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕೆಲಸವನ್ನೂ ಕಳೆದುಕೊಂಡಿದ್ದರು.
ಈ ನೋವಿನ ಬೆನ್ನಲ್ಲೇ ಕಳೆದ ನಾಲ್ಕು ತಿಂಗಳ ಹಿಂದೆ ಶಿಲ್ಪಾ ತನ್ನ ತಾಯಿಯನ್ನು ಕಳೆದುಕೊಂಡಿದ್ದರು. ಜೀವನದಲ್ಲಿ ಒಂದರ ಮೇಲೊಂದರಂತೆ ಬಂದ ಕಷ್ಟ ಶಿಲ್ಪಾರನ್ನು ಖಿನ್ನತೆಗೆ ಒಳಗಾಗುವಂತೆ ಮಾಡಿತ್ತು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಶಿಲ್ಪಾ ಇದೀಗ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊರೊನಾ ಬಿಗ್ ಶಾಕ್; ಮತ್ತೆ ಲಾಕ್ ಡೌನ್?




